ಮಂಗಳವಾರ, ಆಗಸ್ಟ್ 4, 2020
22 °C

ಜೂನ್‌ ಸಗಟು ಹಣದುಬ್ಬರ ಶೇ 1.81ರಷ್ಟು ಕುಸಿತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದ್ದರೂ, ಇಂಧನ, ವಿದ್ಯುತ್‌  ಬೆಲೆ ಇಳಿಕೆಯಿಂದಾಗಿ ಜೂನ್‌ನಲ್ಲಿನ ಸಗಟು ಬೆಲೆ ಆಧರಿಸಿದ ಹಣದುಬ್ಬರವು ಶೇ 1.81ರಷ್ಟು ಇಳಿದಿದೆ.

ಮೇನಲ್ಲಿ ಸಗಟು ಬೆಲೆ ಇಳಿತವು ಶೇ 3.21ರಷ್ಟಿತ್ತು. ತಿಂಗಳ ಸಗಟು ಬೆಲೆ ಸೂಚ್ಯಂಕ ಆಧರಿಸಿದ ವಾರ್ಷಿಕ ಹಣದುಬ್ಬರ ದರವು, ಹಿಂದಿನ ವರ್ಷದ ಇದೇ ಅವಧಿಯಲ್ಲಿನ ಶೇ 2.02ಗೆ ಹೋಲಿಸಿದರೆ  (–) ಶೇ 1.82ರಷ್ಟಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ತಿಳಿಸಿದೆ.

ಜೂನ್‌ನಲ್ಲಿ ಆಹಾರ ಪದಾರ್ಥಗಳ ಹಣದುಬ್ಬರವು ಮೇನಲ್ಲಿನ ಶೇ 1.13ಕ್ಕೆ ಹೋಲಿಸಿದರೆ ಶೇ 2.04ರಷ್ಟಾಗಿದೆ. ಇಂಧನ ಮತ್ತು ವಿದ್ಯುತ್‌ಗಳ ಬೆಲೆ ಇಳಿಕೆಯು ಮೇನಲ್ಲಿನ ಶೇ 19.83ಗೆ ಹೋಲಿಸಿದರೆ ಜೂನ್‌ನಲ್ಲಿ ಶೇ 13.60ರಷ್ಟಾಗಿದೆ.

ತಯಾರಿಕಾ ಸರಕುಗಳ ಹಣದುಬ್ಬರವು ಮೇನಲ್ಲಿನ ಶೇ 0.42 ಬೆಲೆ ಇಳಿಕೆಗೆ ಹೋಲಿಸಿದರೆ ಶೇ 0.08ರಷ್ಟಾಗಿದೆ.

ಏಪ್ರಿಲ್‌ನ ಪರಿಷ್ಕೃತ ಸಗಟು ಹಣದುಬ್ಬರವು ಶೇ 1.57ರಷ್ಟಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು