ಕೋವಿಡ್: ಇಂಡಿಗೊ ನಷ್ಟ ₹ 1,147 ಕೋಟಿ

ನವದೆಹಲಿ: ಕೋವಿಡ್ ಸಾಂಕ್ರಾಮಿಕದ ಪರಿಣಾಮದಿಂದಾಗಿ ಇಂಡಿಗೊ ವಿಮಾನಯಾನ ಸಂಸ್ಥೆಯ ನಷ್ಟ ಹೆಚ್ಚಾಗಿದೆ.
2019–20ರ ಮಾರ್ಚ್ ತ್ರೈಮಾಸಿಕದಲ್ಲಿ ₹ 879 ಕೋಟಿಗಳಷ್ಟಿದ್ದ ನಷ್ಟವು 2020–21ರ ಮಾರ್ಚ್ ತ್ರೈಮಾಸಿಕದಲ್ಲಿ ₹ 1,147 ಕೋಟಿಗಳಿಗೆ ಏರಿಕೆಯಾಗಿದೆ.
ಒಟ್ಟಾರೆ ವರಮಾನವು ₹ 8,634 ಕೋಟಿಗಳಿಂದ ₹ 6,361 ಕೋಟಿಗಳಿಗೆ ಶೇ 26ರಷ್ಟು ಇಳಿಕೆ ಕಂಡಿದೆ.
2020–21ನೇ ಹಣಕಾಸು ವರ್ಷಕ್ಕೆ ನಷ್ಟವು ₹ 233 ಕೋಟಿಗಳಿಂದ ₹ 5,806 ಕೋಟಿಗಳಿಗೆ ಭಾರಿ ಏರಿಕೆ ಕಂಡಿದೆ. ಒಟ್ಟಾರೆ ವರಮಾನ ಶೇ 58ರಷ್ಟು ಇಳಿಕೆ ಆಗಿದ್ದು ₹ 15,677 ಕೋಟಿಗಳಷ್ಟಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.