ಗುರುವಾರ , ಅಕ್ಟೋಬರ್ 1, 2020
28 °C

ಲಾಕ್‌ಡೌನ್‌ | ಚೇತರಿಸಿಕೊಳ್ಳದ ಕೈಗಾರಿಕಾ ವಲಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಲಾಕ್‌ಡೌನ್‌ನಿಂದಾಗಿ ದೇಶದ ಕೈಗಾರಿಕಾ ವಲಯದ ಉತ್ಪಾದನೆಯು ಜೂನ್‌ನಲ್ಲಿ ಶೇಕಡ 16.6ರಷ್ಟು ಇಳಿಕೆ ಕಂಡಿದೆ. ತಯಾರಿಕೆ, ಗಣಿಗಾರಿಕೆ ಮತ್ತು ವಿದ್ಯುತ್‌ ಉತ್ಪಾದನೆ ಕಡಿಮೆ ಆಗಿರುವುದರಿಂದ ಒಟ್ಟಾರೆ ವಲಯದ ಬೆಳವಣಿಗೆ ಮೇಲೆ ಪರಿಣಾಮ ಉಂಟಾಗಿದೆ ಎಂದು ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ ಮಾಹಿತಿ ನೀಡಿದೆ.

ಕೈಗಾರಿಕಾ ಉತ್ಪಾದನಾ ಸೂಚ್ಯಂಕದ (ಐಐಪಿ) ಮೇಲೆ ಲೆಕ್ಕಹಾಕುವ ಈ ವಲಯದ ಬೆಳವಣಿಗೆಯು 2019ರ ಜೂನ್‌ನಲ್ಲಿ ಶೇ 1.3ರಷ್ಟು ಪ್ರಗತಿ ಕಂಡಿತ್ತು. ಏಪ್ರಿಲ್‌–ಜೂನ್‌ ಅವಧಿಗೆ ಶೇ 35.9ರಷ್ಟು ಇಳಿಕೆ ಕಂಡಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಶೇ 3ರಷ್ಟು ಬೆಳವಣಿಗೆ ಕಂಡಿತ್ತು.

ಕೋವಿಡ್‌ ಸಂದರ್ಭದಲ್ಲಿನ ತಿಂಗಳ ಅಂಕಿ–ಅಂಶವನ್ನು ಕೋವಿಡ್‌ಗೂ ಮೊದಲಿನ ತಿಂಗಳಿನೊಂದಿಗೆ ಹೋಲಿಸುವುದು ಅಷ್ಟೊಂದು ಸೂಕ್ತವಾಗಲಾರದು ಎಂದು ಸಚಿವಾಲಯ ಹೇಳಿದೆ.

ಲಾಕ್‌ಡೌನ್‌ ಪರಿಣಾಮವಾಗಿ 2020ರ ಮಾರ್ಚ್‌ ಅಂತ್ಯದಿಂದ ಕೈಗಾರಿಕಾ ವಲಯದ ಚಟುವಟಿಕೆ ಸ್ಥಗಿತಗೊಂಡಿದ್ದವು. ಇದು ವಲಯದ ಬೆಳವಣಿಗೆಯ ಮೇಲೆ ಪರಿಣಾಮ ಬೀರಿತ್ತು. ಇದೀಗ ಲಾಕ್‌ಡೌನ್‌ ಸಡಿಲಿಸುತ್ತಿರುವುದರಿಂದ ಕೈಗಾರಿಕಾ ಚಟುವಟಿಕೆಗಳು ಮತ್ತೆ ಆರಂಭವಾಗಿವೆ ಎಂದು ತಿಳಿಸಿದೆ.

ಉತ್ಪಾದನೆ ಇಳಿಕೆ

17.1%: ತಯಾರಿಕಾ ವಲಯ

19.8%:ಗಣಿಗಾರಿಕೆ

10%:ವಿದ್ಯುತ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು