ಶನಿವಾರ, 30 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾಮಧೇಯ ದೂರಿಗೆ ಸ್ಪಷ್ಟನೆ ನೀಡಿದ ‘ಇನ್ಫಿ’

Last Updated 20 ನವೆಂಬರ್ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ಮಾಧ್ಯಮಗಳಲ್ಲಿ ಕಳೆದ ವಾರ ಪ್ರಕಟವಾಗಿದ್ದ ಅನಾಮಧೇಯರ ದೂರುಗಳಲ್ಲಿ ಹೊಸದೇನೂ ಇಲ್ಲ ಎಂದು ಐ.ಟಿ ದೈತ್ಯ ಸಂಸ್ಥೆ ಇನ್ಫೊಸಿಸ್‌ ಸ್ಪಷ್ಟಪಡಿಸಿದೆ.

ಕಂಪನಿಯ ಸಿಇಒ ಸಲೀಲ್‌ ಪಾರೇಖ್‌ ಅವರ ವಿರುದ್ಧ ಇನ್ನೊಂದು ಅನಾಮಧೇಯ ದೂರು ಸಲ್ಲಿಕೆಯಾಗಿದೆ ಎಂದು ಕಳೆದ ವಾರ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿದ್ದವು. ಈ ಸಂಬಂಧ ಷೇರುಪೇಟೆಗಳು ಕಂಪನಿಯಿಂದ ಸ್ಪಷ್ಟನೆ ಬಯಸಿದ್ದವು. ಸಂಸ್ಥೆಯು ಹಿಂದಿನ ತಿಂಗಳು ಬಹಿರಂಗಪಡಿಸಿದ್ದ ಅನಾಮಧೇಯರ ಆರೋಪಗಳೇ ಈ ದೂರಿನಲ್ಲಿ ವಿಸ್ತೃತ ರೂಪದಲ್ಲಿ ಇವೆಯಷ್ಟೆ ಎಂದು ಕಂಪನಿಯು ತಿಳಿಸಿದೆ.

ಅಕ್ಟೋಬರ್‌ 22ರಂದು ಕಂಪನಿಯು ಷೇರುಪೇಟೆಗಳಿಗೆ ಮಾಹಿತಿ ನೀಡಿದ್ದ ಅನಾಮಧೇಯರ ದಿನಾಂಕ ನಮೂದಿಸದ ಪತ್ರದಲ್ಲಿನ ವಿವರಗಳನ್ನೇ ಮಾಧ್ಯಮಗಳು ಮತ್ತೆ ವಿಸ್ತೃತವಾಗಿ ಪ್ರಕಟಿಸಿದ್ದವು ಎಂದು ಕಂಪನಿಯು ಷೇರುಪೇಟೆಗಳಿಗೆ ವಿವರಣೆ ನೀಡಿದೆ.

ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ನಿಯಮಗಳು ಮತ್ತು ಸಂಸ್ಥೆಯ ಧೋರಣೆಗೆ ಅನುಗುಣವಾಗಿ ದೂರಿಗೆ ಸಂಬಂಧಿಸಿದಂತೆ ಎಲ್ಲ ಮಾಹಿತಿಯನ್ನು ನೀಡಲಾಗಿದೆ. ಅಗತ್ಯ ಬಿದ್ದರೆ ಕಂಪನಿಯು ಯಾವುದೇ ಹೆಚ್ಚುವರಿ ಮಾಹಿತಿ ಮತ್ತು ವಿವರಣೆ ನೀಡಲು ಸಿದ್ಧವಿದೆ ಎಂದೂ ತಿಳಿಸಿದೆ.

ಕಳೆದ ವಾರ ಪ್ರಕಟವಾಗಿದ್ದ ವರದಿಗಳು ಹೊಸ ಆರೋಪಗಳಾಗಿವೆ ಎನ್ನುವ ಅಭಿಪ್ರಾಯ ಮೂಡಿಸಿದ್ದ ಹಿನ್ನೆಲೆಯಲ್ಲಿ ಕಂಪನಿಯು ಈ ಸ್ಪಷ್ಟನೆ ನೀಡಿದೆ.

ಕಂಪನಿಯ ಉನ್ನತ ಅಧಿಕಾರಿಗಳು ನ್ಯಾಯಬಾಹಿರ ವಿಧಾನ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ ಅನಾಮಧೇಯ ದೂರುಗಳು ನಿರ್ದೇಶಕ ಮಂಡಳಿಗೆ ಬಂದಿವೆ ಎಂದು ಕಂಪನಿಯು ಅಕ್ಟೋಬರ್‌ನಲ್ಲಿಯೇ ಷೇರುಪೇಟೆಗಳ ಗಮನಕ್ಕೆ ತಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT