ಬಡ್ಡಿ ನಿಗದಿಗೆ ಹೊಸ ಮಾನದಂಡ

7

ಬಡ್ಡಿ ನಿಗದಿಗೆ ಹೊಸ ಮಾನದಂಡ

Published:
Updated:
Deccan Herald

ಮುಂಬೈ: ಗೃಹ, ವಾಹನ ಖರೀದಿ, ವೈಯಕ್ತಿಕ ಹಾಗೂ ಸಣ್ಣ – ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಇ) ಸಂಬಂಧಿಸಿದ ಬದಲಾಗುವ ಬಡ್ಡಿ ದರಗಳನ್ನು ಹೊಸ ಮಾನದಂಡಕ್ಕೆ ಅನುಗುಣವಾಗಿ ನಿರ್ಧರಿಸುವ ವ್ಯವಸ್ಥೆಯು ಮುಂದಿನ ವರ್ಷದ ಏರ್ಪಿಲ್‌ನಿಂದ ಜಾರಿಗೆ ಬರಲಿದೆ.

ವಿವಿಧ ಬಗೆಯ ಸಾಲಗಳ ಬಡ್ಡಿ ದರ ವಿಷಯದಲ್ಲಿ ಹೆಚ್ಚಿನ ಪಾರದರ್ಶಕತೆ ಕಾಯ್ದುಕೊಳ್ಳಲು ರೆಪೊ ದರ ಅಥವಾ ಬಾಂಡ್‌ಗಳ ಗಳಿಕೆ ಆಧರಿಸುವ ಹೊಸ ಮಾನದಂಡ ಅಳವಡಿಕೆಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಉದ್ದೇಶಿಸಿದೆ.

ಸದ್ಯಕ್ಕೆ ಬ್ಯಾಂಕ್‌ಗಳು ಆಂತರಿಕ ಮಾನದಂಡಗಳಾದ ಗರಿಷ್ಠ ಬಡ್ಡಿ ದರ (ಪಿಎಲ್‌ಆರ್‌), ಬಿಪಿಎಲ್‌ಆರ್‌, ಮೂಲ ದರ, ನಿಧಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ ಬಡ್ಡಿ ದರ (ಎಂಸಿಎಲ್‌ಆರ್‌) ಆಧರಿಸಿ ಸಾಲಗಳ ಬಡ್ಡಿ ನಿಗದಿಪಡಿಸುತ್ತವೆ.

ಬಾಹ್ಯ ಮಾನದಂಡಗಳಾದ ರೆಪೊ ದರ, ಸರ್ಕಾರಿ ಸಾಲಪತ್ರ ಮತ್ತು ಬಾಂಡ್‌ಗಳಲ್ಲಿನ ಹೂಡಿಕೆಯ ಪ್ರತಿಫಲ ಆಧರಿಸಿ ಬಡ್ಡಿ ದರ ನಿಗದಿಪಡಿಸುವ ಬಗ್ಗೆ ಆರ್‌ಬಿಐ ಸದ್ಯದಲ್ಲೇ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಲಿದೆ.

‘ಎಂಸಿಎಲ್‌ಆರ್‌’ ವ್ಯವಸ್ಥೆಯ ಕಾರ್ಯನಿರ್ವಹಣೆ ಬಗ್ಗೆ ವರದಿ ನೀಡಲು ಆರ್‌ಬಿಐ ನೇಮಿಸಿದ್ದ ಸಮಿತಿಯು, ಬದಲಾಗುವ ಬಡ್ಡಿ ದರಗಳಿಗೆ  ಬಾಹ್ಯ ಮಾನದಂಡ ಅನ್ವಯಗೊಳಿಸಲು ಸಲಹೆ ನೀಡಿತ್ತು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !