ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ನಿಯಮ ಉಲ್ಲಂಘಿಸಿದರೆ ವಿಮೆ ಪ್ರೀಮಿಯಂ ಹೆಚ್ಚು!

Last Updated 18 ಜನವರಿ 2021, 19:14 IST
ಅಕ್ಷರ ಗಾತ್ರ

ನವದೆಹಲಿ: ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ರಚಿಸಿದ್ದ ಕಾರ್ಯಪಡೆಯೊಂದು, ವಾಹನಗಳ ವಿಮಾ ಮೊತ್ತದಲ್ಲಿ ‘ಸಂಚಾರ ನಿಯಮ ಉಲ್ಲಂಘನೆ ಪ್ರೀಮಿಯಂ’ ಕೂಡ ಸೇರಿಸಬೇಕು ಎಂದು ಶಿಫಾರಸು ಮಾಡಿದೆ.

ವಾಹನದ ಮಾಲೀಕ ಎಷ್ಟು ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಾನೆ ಎಂಬುದನ್ನು ಆಧರಿಸಿ ಈ ಪ್ರೀಮಿಯಂ ಮೊತ್ತ ನಿರ್ಧಾರವಾಗುತ್ತದೆ. ಸಂಚಾರ ನಿಯಮ ಉಲ್ಲಂಘನೆ ಪ್ರೀಮಿಯಂ ಮೊತ್ತವನ್ನು ವಾಹನದ ಮಾಲೀಕನೇ ಪಾವತಿಸಬೇಕು. ಪಾನಮತ್ತರಾಗಿ ವಾಹನ ಚಾಲನೆ ಮಾಡಿದ ಅಪರಾಧಕ್ಕೆ, 100 ಪಾಯಿಂಟ್ಸ್ ದಂಡವನ್ನು ವಿಧಿಸಲಾಗುತ್ತದೆ.

ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲುಗಡೆ ಮಾಡಿದರೆ, 10 ಪಾಯಿಂಟ್ಸ್ ದಂಡ ವಿಧಿಸಲಾಗುತ್ತದೆ. ಒಟ್ಟು ಪಾಯಿಂಟ್ಸ್ ಆಧಾರದಲ್ಲಿ ಪ್ರೀಮಿಯಂ ಮೊತ್ತವನ್ನು ನಿರ್ಧರಿಸಲಾಗುತ್ತದೆ. ಹೊಸ ವಾಹನ ಖರೀದಿಸಿ, ಅದಕ್ಕೆ ವಿಮೆಯ ರಕ್ಷಣೆ ಪಡೆದುಕೊಳ್ಳುವಾಗ ಸಂಚಾರ ನಿಯಮಗಳ ಉಲ್ಲಂಘನೆಯ ಪ್ರೀಮಿಯಂ ಪಾವತಿಸಬೇಕಿಲ್ಲ. ಆದರೆ, ವಿಮೆಯನ್ನು ನವೀಕರಿಸುವ ಸಂದರ್ಭದಲ್ಲಿ, ಸಂಚಾರ ನಿಯಮಗಳ ಉಲ್ಲಂಘನೆ ಎಷ್ಟು ಬಾರಿ ಆಗಿದೆ ಎಂಬುದನ್ನು ಆಧರಿಸಿ ಪ್ರೀಮಿಯಂ ನಿಗದಿ ಮಾಡಲಾಗುತ್ತದೆ ಎಂದು ಶಿಫಾರಸಿನಲ್ಲಿ ಹೇಳಲಾಗಿದೆ.

ವಾಹನ ಮಾರಾಟದಿಂದಾಗಿ ವಿಮೆಯ ಮಾಲೀಕತ್ವ ಬದಲಾದರೆ, ಹೊಸ ಮಾಲೀಕನ ಸಂಚಾರ ನಿಯಮಗಳ ಉಲ್ಲಂಘನೆ ಪ್ರೀಮಿಯಂ ಮೊತ್ತವನ್ನು, ವಿಮೆಯ ಮಾಲೀಕತ್ವ ಬದಲಾದ ದಿನದಿಂದ ಹೊಸದಾಗಿ ಲೆಕ್ಕಹಾಕಲಾಗುತ್ತದೆ. ಈ ರೀತಿಯಲ್ಲಿ ಪ್ರೀಮಿಯಂ ಲೆಕ್ಕ ಹಾಕುವ ವ್ಯವಸ್ಥೆಯನ್ನು ಪರೀಕ್ಷಾರ್ಥವಾಗಿ ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ಜಾರಿಗೆ ತರಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT