ಐಆರ್‌ಎಫ್‌ಸಿ ಐಪಿಒ: ₹ 4,600 ಕೋಟಿ ಸಂಗ್ರಹ ನಿರೀಕ್ಷೆ

ನವದೆಹಲಿ: ಭಾರತೀಯ ರೈಲ್ವೆ ಹಣಕಾಸು ನಿಗಮದ (ಐಆರ್‌ಎಫ್‌ಸಿ) ₹ 4,600 ಕೋಟಿ ಮೊತ್ತದ ಷೇರುಗಳು ಸಾರ್ವಜನಿಕರಿಗೆ ಆರಂಭಿಕ ಖರೀದಿಗೆ (ಐಪಿಒ) ಇದೇ 18ರಂದು ಮುಕ್ತವಾಗಲಿವೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣಾ ಇಲಾಖೆಯ (ಡಿಐಪಿಎಎಂ) ಕಾರ್ಯದರ್ಶಿ ಟಿ.ಕೆ. ಪಾಂಡೆ ತಿಳಿಸಿದ್ದಾರೆ.
ಪ್ರತಿ ಷೇರಿಗೆ ₹ 25ರಿಂದ ₹ 26ರ ಬೆಲೆ ನಿಗದಿ ಮಾಡಲಾಗಿದೆ ಎಂದು ಪಾಂಡೆ ಟ್ವೀಟ್ ಮಾಡಿದ್ದಾರೆ. 178.20 ಕೋಟಿ ಷೇರುಗಳನ್ನು ಮಾರಾಟಕ್ಕೆ ಇಡಲಾಗಿದೆ. ಬ್ಯಾಂಕೇತರ ಹಣಕಾಸು ಕಂಪನಿಯಾಗಿರುವ (ಎನ್‌ಬಿಎಫ್‌ಸಿ) ಐಆರ್‌ಎಫ್‌ಸಿಯ ಮೊದಲ ಐಪಿಒ ಇದಾಗಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.