ಬುಧವಾರ, ಆಗಸ್ಟ್ 4, 2021
21 °C

₹ 62 ಸಾವಿರ ಕೋಟಿ ಆದಾಯ ತೆರಿಗೆ ಮರುಪಾವತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಈ ವರ್ಷದ ಏಪ್ರಿಲ್‌ 8ರಿಂದ ಜೂನ್‌ 30ವರೆಗಿನ ಅವಧಿಯಲ್ಲಿ ಆದಾಯ ತೆರಿಗೆ ಇಲಾಖೆಯು 20 ಲಕ್ಷ ತೆರಿಗೆದಾರರಿಗೆ ₹ 62,361 ಕೋಟಿ ಮೊತ್ತವನ್ನು ಮರು ಪಾವತಿ ಮಾಡಿದೆ.

ಈ ಅವಧಿಯಲ್ಲಿನ 56 ಕೆಲಸದ ದಿನಗಳಲ್ಲಿ ಪ್ರತಿ ನಿಮಿಷಕ್ಕೆ 76 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ತೆರಿಗೆದಾರರ ಬ್ಯಾಂಕ್‌ ಖಾತೆಗೆ ನೇರವಾಗಿ ಮರುಪಾವತಿ ಮಾಡಲಾಗಿದೆ.

ಇಲಾಖೆಯಿಂದ ಬಂದಿರುವ ಇ–ಮೇಲ್‌ಗಳಿಗೆ ತಕ್ಷಣ ಸ್ಪಂದಿಸಿದರೆ ಅಂಥವರ ಪ್ರಕರಣಗಳಲ್ಲೂ ವಿಳಂಬ ಮಾಡದೆ ಮರುಪಾವತಿ ಮಾಡಲಾಗುವುದು ಎಂದು  ನೇರ ತೆರಿಗೆ ಕೇಂದ್ರೀಯ ಮಂಡಳಿ (ಸಿಬಿಡಿಟಿ) ತಿಳಿಸಿದೆ.

19.07 ಲಕ್ಷ: ವೈಯಕ್ತಿಕ ಆದಾಯ ತೆರಿಗೆದಾರರು

* ₹ 23,453 ಕೋಟಿ ಮರುಪಾವತಿ 

* 1.36 ಲಕ್ಷ ಕಾರ್ಪೊರೇಟ್ ತೆರಿಗೆದಾರರು

* ₹ 38,908 ಕೋಟಿ ಮರುಪಾವತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.