ಜನ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ನ ಸೌಲಭ್ಯ

7

ಜನ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ನ ಸೌಲಭ್ಯ

Published:
Updated:

ಬೆಂಗಳೂರು: ಜನ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌, ಸ್ವಯಂಚಾಲಿತ ಹಣ ವರ್ಗಾವಣೆಯ ಚಾಲ್ತಿ ಖಾತೆ ಸೌಲಭ್ಯ ಆರಂಭಿಸಿದೆ.

ಚಾಲ್ತಿ ಖಾತೆಯಿಂದ ಸ್ಥಿರ ಠೇವಣಿ ಖಾತೆಗೆ ಸ್ವಯಂ ಚಾಲಿತವಾಗಿ ಹಣ ವರ್ಗಾವಣೆಗೊಳ್ಳುವ ಸೌಲಭ್ಯ ಇದಾಗಿದೆ. ಸ್ವಯಂ ಚಾಲಿತ ಹಣ ವರ್ಗಾವಣೆಗೊಳ್ಳುವ 365 ದಿನಗಳ ಠೇವಣಿಗೆ ಶೇ 8.5ರಷ್ಟು ಬಡ್ಡಿ ದೊರೆಯಲಿದೆ. ಬ್ಯಾಂಕ್‌ನ ಹಾಲಿ ಮತ್ತು ಹೊಸ ಗ್ರಾಹಕರು ಈ ಹೊಸ ಸೌಲಭ್ಯ ಪಡೆದುಕೊಳ್ಳಬಹುದು.

‘ನಮ್ಮ ಎಲ್ಲ ಸೇವೆಗಳು ಗ್ರಾಹಕರಿಗೆ ಅತ್ಯುತ್ತಮ ಲಾಭ ತಂದುಕೊಡಲಿವೆ. ಸದ್ಯಕ್ಕೆ ಬ್ಯಾಂಕ್‌ ನಿಯಮಿತ ಸ್ಥಿರ ಠೇವಣಿಗೆ ಶೇ 9ರಷ್ಟು ಮತ್ತು ಹಿರಿಯ ನಾಗರಿಕರಿಗೆ ಶೇ 9.25ರಷ್ಟು ಬಡ್ಡಿ ನೀಡುತ್ತಿದೆ’ ಎಂದು ಬ್ಯಾಂಕ್‌ನ ಕಿರು ಮತ್ತು ಸಣ್ಣ ಉದ್ದಿಮೆಗಳ ವಿಭಾಗದ ಮುಖ್ಯಸ್ಥ ರಾಬಿನ್‌ ಸ್ಟೀಫನ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !