ಈ ಕುರಿತು ಸೋನಿ ಮತ್ತು ಜೀ ಕಂಪನಿಗಳು ಪ್ರತಿಕ್ರಿಯೆ ನೀಡಿಲ್ಲ. ವಿಲೀನದ ನಂತರ ಕಂಪನಿಯ ಒಟ್ಟು ಮೌಲ್ಯವು ₹83 ಸಾವಿರ ಕೋಟಿಯಷ್ಟು ಆಗಲಿದೆ. 2021ರಲ್ಲಿ ವಿಲೀನದ ಘೋಷಣೆ ಮಾಡಲಾಗಿತ್ತು. ಆಗಸ್ಟ್‌ನಲ್ಲಿ ಅದಕ್ಕೆ ಒಪ್ಪಿಗೆ ದೊರೆತಿದೆ. ಜೀ ಸಮೂಹವು ಹಣಕಾಸು ಸಂಸ್ಥೆಗಳಿಗೆ ಸಾಲ ಬಾಕಿ ಉಳಿಸಿಕೊಂಡಿದೆ. ಇದರ ಜೊತೆಗೆ ಹಲವು ಕಾನೂನು ತೊಡಕುಗಳಿಂದಾಗಿ ವಿಲೀನವು ವಿಳಂಬ ಆಗುತ್ತಿದೆ.