ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಇ.ವಿ. ತಯಾರಿಕೆ: ಸುಜುಕಿ ಮೋಟರ್‌ನಿಂದ ₹ 9,500 ಕೋಟಿ ಹೂಡಿಕೆ

Last Updated 19 ಮಾರ್ಚ್ 2022, 16:34 IST
ಅಕ್ಷರ ಗಾತ್ರ

ಟೋಕಿಯೊ (ರಾಯಿಟರ್ಸ್‌): ಭಾರತದಲ್ಲಿ ವಿದ್ಯುತ್‌ ಚಾಲಿತ (ಇ.ವಿ.) ವಾಹನ ಮತ್ತು ಬ್ಯಾಟರಿ ತಯಾರಿಕೆಗಾಗಿ ₹ 9,500 ಕೋಟಿ ಹೂಡಿಕೆ ಮಾಡಲು ಜಪಾನ್‌ನ ಸುಜುಕಿ ಮೋಟರ್‌ ಕಂಪನಿಯು ಉದ್ದೇಶಿಸಿದೆ ಎಂದು ಅಲ್ಲಿನ ನಿಕೇಯ್‌ ಬಿಸಿನೆಸ್‌ ಡೈಲಿ ಶನಿವಾರ ವರದಿ ಮಾಡಿವೆ.

ಭಾರತದಲ್ಲಿ ಜಪಾನ್‌ ಮುಂದಿನ ಐದು ವರ್ಷಗಳಲ್ಲಿ ₹ 3.2 ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ಘೋಷಿಸಿದ್ದು, ಸುಜುಕಿ ಕಂಪನಿಯ ಹೂಡಿಕೆಯು ಅದರ ಒಂದು ಭಾಗವಾಗಿರಲಿದೆ ಎಂದು ತಿಳಿಸಿದೆ.

2025ರ ಆರಂಭದಲ್ಲಿ ಭಾರತದಲ್ಲಿ ವಿದ್ಯುತ್ ಚಾಲಿತ ವಾಹನಗಳ ತಯಾರಿಕೆ ಆರಂಭಿಸುವ ಉದ್ದೇಶದಿಂದ ತಯಾರಿಕಾ ಘಟಕ ಸ್ಥಾಪನೆ ಮಾಡಲು ಕಂಪನಿಯು ನಿರ್ಧರಿಸಿದೆ ಎಂದು ಹೇಳಿದೆ. ಈ ವರದಿಯನ್ನು ಖಚಿತಪಡಿಸಲು ಕಂಪನಿಯ ವಕ್ತಾರರು ನಿರಾಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT