ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆಜಾನ್‌ ಸ್ಥಾಪಕ ಜೆಫ್‌ ಬಿಜೊಸ್‌ ವಿಶ್ವದ ಮೊದಲ ಲಕ್ಷ ಕೋಟ್ಯಧಿಪತಿ

ಮುಂದಿನ 6 ವರ್ಷಗಳಲ್ಲಿ ಈ ಸಾಧನೆ ನಿರೀಕ್ಷೆ
Last Updated 15 ಮೇ 2020, 19:50 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ವಿಶ್ವದ ಅತ್ಯಂತ ಸಿರಿವಂತ ಉದ್ಯಮಿಯಾಗಿರುವ ಇ–ಕಾಮರ್ಸ್‌ ದೈತ್ಯ ಸಂಸ್ಥೆ ಅಮೆಜಾನ್‌ ಸ್ಥಾಪಕ ಜೆಫ್‌ ಬಿಜೋಸ್‌, ಮುಂದಿನ 6 ವರ್ಷಗಳಲ್ಲಿ ವಿಶ್ವದ ಮೊದಲ ಲಕ್ಷ ಕೋಟ್ಯಧಿಪತಿ (trillionaire) ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಉದ್ಯಮ ಸಲಹಾ ಸಂಸ್ಥೆ ಕಂಪೇರಿಸನ್‌ ನಡೆಸಿರುವ ಸಂಶೋಧನೆ ಪ್ರಕಾರ, ಬಿಜೋಸ್‌ (56), 2026ರ ವೇಳೆಗೆ 1,000 ಶತಕೋಟಿ (1,00,000) ಡಾಲರ್‌ ಸಂಪತ್ತಿನ ಒಡೆಯರಾಗಲಿದ್ದಾರೆ. ಸದ್ಯದ ರೂಪಾಯಿ ಡಾಲರ್‌ ವಿನಿಮಯ ಲೆಕ್ಕದಲ್ಲಿ ಇದು ₹ 75,00,000 ಕೋಟಿಗಳಷ್ಟಾಗಲಿದೆ.

ನ್ಯೂಯಾರ್ಕ್‌ ಷೇರುಪೇಟೆಯ (ಎನ್‌ವೈಎಸ್‌ಇ) ಅತ್ಯಂತ ಮೌಲ್ಯಯುತ ಕಂಪನಿಗಳ ಮಾರುಕಟ್ಟೆ ಮೌಲ್ಯ ಮತ್ತು ಫೋರ್ಬ್ಸ್‌ ನಿಯತಕಾಲಿಕೆಯು ಪಟ್ಟಿ ಮಾಡಿರುವ ಮುಂಚೂಣಿ 25 ಕುಬೇರರ ಸಂಪತ್ತಿನ ವಿಶ್ಲೇಷಣೆ ಮಾಡಲಾಗಿದೆ. ಹಿಂದಿನ 5 ವರ್ಷಗಳಲ್ಲಿನ ಸರಾಸರಿ ಸಂಪತ್ತು ಹೆಚ್ಚಳ ಮತ್ತು ಮುಂದಿನ ವರ್ಷಗಳಲ್ಲಿನ ಅಂದಾಜು ಆಧರಿಸಿ ಈ ನಿರ್ಧಾರಕ್ಕೆ ಬರಲಾಗಿದೆ.

ಪಟ್ಟಿಯಲ್ಲಿ ಚೀನಾದ ರಿಯಲ್‌ ಎಸ್ಟೇಟ್‌ ದಿಗ್ಗಜ ಷು ಜಿಯಾಯಿನ್‌ 2ನೇಯ ಮತ್ತು ಭಾರತದ ಅತ್ಯಂತ ಸಿರಿವಂತ ಉದ್ಯಮಿ ಮುಕೇಶ್‌ ಅಂಬಾನಿ 5ನೇ ಸ್ಥಾನದಲ್ಲಿ ಇದ್ದಾರೆ. ಇವರು ತಮ್ಮ 75ನೇ ವಯಸ್ಸಿನಲ್ಲಿ ಅಂದರೆ 2033ರಲ್ಲಿ ಲಕ್ಷ ಕೋಟ್ಯಧಿಪತಿ ಪಟ್ಟಕ್ಕೆ ಭಾಜನವಾಗಲಿದ್ದಾರೆ.

ಸಂಪತ್ತಿನ ವಿಶ್ಲೇಷಣೆಗೆ ಕಂಪನಿ ಪರಿಗಣಿಸಿದ್ದ 25 ಕುಬೇರರ ಪೈಕಿ 11 ಜನರು ಮಾತ್ರ ತಮ್ಮ ಜೀವಿತಾವಧಿಯಲ್ಲಿ ಲಕ್ಷ ಕೋಟ್ಯಧಿಪತಿ ಆಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT