ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿವಾಳಿ ಪ್ರಕ್ರಿಯೆಗೆ ಜೆಟ್‌

Last Updated 20 ಜೂನ್ 2019, 19:45 IST
ಅಕ್ಷರ ಗಾತ್ರ

ಮುಂಬೈ: ಖಾಸಗಿ ವಿಮಾನ ಯಾನ ಸಂಸ್ಥೆ ಜೆಟ್‌ ಏರ್‌ವೇಸ್‌ ಅನ್ನು ದಿವಾಳಿ ಪ್ರಕ್ರಿಯೆಗೆ ಒಳಪಡಿಸಲುರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿಯು (ಎನ್‌ಸಿಎಲ್‌ಟಿ) ಗುರುವಾರ ಒಪ್ಪಿಗೆ ನೀಡಿದೆ.

ಈ ಪ್ರಕ್ರಿಯೆ ಇತ್ಯರ್ಥಪಡಿಸಲು ಆರು ತಿಂಗಳ ಗಡುವು ನೀಡಲು ಅವಕಾಶ ಇದೆ. ಆದರೆ, ರಾಷ್ಟ್ರೀಯ ಹಿತಾಸಕ್ತಿಯ ಉದ್ದೇಶದಿಂದ90 ದಿನಗಳ (ಮೂರು ತಿಂಗಳು) ಕಾಲಮಿತಿಯೊಳಗೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದೆ.

ದಿವಾಳಿ ಪ್ರಕ್ರಿಯೆ ನಡೆಸಲು ಗ್ರ್ಯಾಂಟ್‌ ಥೋರ್ಟನ್‌ ಕಂಪನಿಯ ಆಶಿಶ್‌ ಚುಚೇರಿಯಾ ಅವರನ್ನು ನೇಮಿಸಿದೆ.

₹ 8 ಸಾವಿರ ಕೋಟಿ ಸಾಲದ ಬಾಕಿ ವಸೂಲಿ ಮಾಡಲು ಸಂಸ್ಥೆಯನ್ನು ಮಾರಾಟ ಮಾಡುವ ಬದಲಿಗೆ ಎನ್‌ಸಿಎಲ್‌ಟಿ ಮೂಲಕ ದಿವಾಳಿ ಪ್ರಕ್ರಿಯೆಗೆ ಒಳಪಡಿಸಲು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ನೇತೃತ್ವದಲ್ಲಿನ 26 ಬ್ಯಾಂಕ್‌ಗಳ ಒಕ್ಕೂಟವು ತೀರ್ಮಾನಿಸಿದೆ. ಹೀಗಾಗಿ ಪ್ರಾಧಿಕಾರವು ಈ ಆದೇಶ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT