ನವದೆಹಲಿ: ’ಸಾಫ್ಟ್ವೇರ್, ಸೆಮಿಕಂಡಕ್ಟರ್, ಕ್ಲೌಡ್ ಮೂಲಸೌಕರ್ಯ, ಕೃತಕ ಬುದ್ಧಿಮತ್ತೆ (ಎ.ಐ) ಕ್ಷೇತ್ರಗಳಲ್ಲಿನ ಪರಸ್ಪರ ಸಹಕಾರಕ್ಕಾಗಿ, ಜಿಯೊ, ಆಂಥ್ರೊಪಿಕ್, ಎರಿಕ್ಸನ್ ಸೇರಿದಂತೆ ಜಾಗತಿಕ ಮಟ್ಟದ 12 ಸಮಾನ ಮನಸ್ಕ ತಂತ್ರಜ್ಞಾನ ಕಂಪನಿಗಳು ’ವಿಶ್ವಸ್ಥ ಟೆಕ್ ಮೈತ್ರಿಕೂಟ’ ಸ್ಥಾಪನೆಗೆ ಮುಂದಾಗಿವೆ.

ಮ್ಯೂನಿಚ್ನಲ್ಲಿ ನಡೆದ ಜಾಗತಿಕ ತಂತ್ರಜ್ಞಾನ ಕಂಪನಿಗಳ ‘ಭದ್ರತಾ ಸಮ್ಮೇಳನ–2026’ರಲ್ಲಿ ಈ ಮೈತ್ರಿಕೂಟ ರಚನೆಯನ್ನು ಘೋಷಿಸಲಾಯಿತು.

ಆಫ್ರಿಕಾ, ಏಷ್ಯಾ, ಐರೋಪ್ಯ ಮತ್ತು ಉತ್ತರ ಅಮೆರಿಕದ 15 ಕಂಪನಿಗಳು ಈ ಒಕ್ಕೂಟದಲ್ಲಿವೆ. ಎಡಬ್ಲ್ಯುಎಸ್, ಕ್ಯಾಸವಾ ಟೆಕ್ನಾಲಜೀಸ್, ಕೊಹೆರೆ, ಗೂಗಲ್ ಕ್ಲೌಡ್, ಹನ್ವಾ, ಮೈಕ್ರೊಸಾಫ್ಟ್, ನೋಕಿಯಾ, ಎನ್ಸ್ಕೇಲ್, ಎನ್ಟಿಟಿ, ರ್ಯಾಪಿಡಸ್, ಎಸ್ಎಎಬಿ ಮತ್ತು ಎಸ್ಎಪಿ ಮೈತ್ರಿಕೂಟದ ಭಾಗವಾಗಿರುವ ಇತರೆ ಕಂಪನಿಗಳು.

ಕೂಟದ ಭಾಗವಾಗಿರುವ ಕಂಪನಿಗಳು ಪಾರದರ್ಶಕತೆ, ಭದ್ರತೆ ಮತ್ತು ದತ್ತಾಂಶ ಸಂರಕ್ಷಣೆಗೆ ಬದ್ಧವಾಗಿರುತ್ತವೆ ಆ ಮೂಲಕ ಜಗತ್ತಿನಾದ್ಯಂತ ಜನರಿಗೆ ತಂತ್ರಜ್ಞಾನದ ಪ್ರಯೋಜನಗಳನ್ನು ಒದಗಿಸಲಿದೆ’ ಎಂದು ಪ್ರಕಟಣೆ ತಿಳಿಸಿದೆ.

‘ಜಾಗತಿಕ ಕಂಪನಿಗಳೊಂದಿಗಿನ ಸಹಭಾಗಿತ್ವವು ಡಿಜಿಟಲ್ ಅವಕಾಶಗಳನ್ನು ಹೆಚ್ಚಿಸಲಿದ್ದು, ಕ್ಲೌಡ್, ಎ.ಐ ಸೇರಿ ಮುಂದಿನ ತಲೆಮಾರಿನ ತಂತ್ರಜ್ಞಾನ ಕ್ಷೇತ್ರದಲ್ಲಿ ಸುಸ್ಥಿರತೆಯನ್ನು ಬಲಪಡಿಸುತ್ತದೆ‘ ಎಂದು ಜಿಯೊ ಪ್ಲ್ಯಾಟ್ಫಾರ್ಮ್ಸ್ನ ಸಿಇಒ ಕಿರಣ್ ಥಾಮಸ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.