ಶುಕ್ರವಾರ, ಮಾರ್ಚ್ 31, 2023
32 °C

ಜಾಗ್ವಾರ್‌ ಲ್ಯಾಂಡ್‌ ರೋವರ್‌ ‘ಡಿಫೆಂಡರ್‌ 90’ ಮಾರಾಟ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಜಾಗ್ವಾರ್‌ ಲ್ಯಾಂಡ್‌ ರೋವರ್‌ (ಜೆಎಲ್‌ಆರ್‌) ಇಂಡಿಯಾ ಕಂಪನಿಯು ದೇಶದಲ್ಲಿ ‘ಡಿಫೆಂಡರ್‌ 90’ ಮಾರಾಟವನ್ನು ಆರಂಭಿಸಿದೆ. ಇದರ ಎಕ್ಸ್‌ ಷೋರೂಂ ಬೆಲೆ ₹ 76.57 ಲಕ್ಷದಿಂದ ಆರಂಭವಾಗುತ್ತದೆ.

‘ಡಿಫೆಂಡರ್‌ 90’ ಮಾದರಿಯಲ್ಲಿ ಮೂರು ಬಗೆಯ ಎಂಜಿನ್‌ ಆಯ್ಕೆಗಳನ್ನು ನೀಡಲಾಗಿದೆ. 2 ಲೀಟರ್‌ ಪೆಟ್ರೋಲ್‌ ಎಂಜಿನ್‌ 221ಕೆಡಬ್ಲ್ಯು ಶಕ್ತಿ ಹೊರಸೂಸಬಲ್ಲದು. 3 ಲೀಟರ್‌ ಪೆಟ್ರೋಲ್‌ ಎಂಜಿನ್‌ 294 ಕೆಡಬ್ಲ್ಯು ಶಕ್ತಿ ಹೊರಸೂಸಬಲ್ಲದು ಹಾಗೂ 3 ಲೀಟರ್‌ ಡೀಸೆಲ್ ಎಂಜಿನ್‌ 221 ಕೆಡಬ್ಲ್ಯು ಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ಹೇಳಿದೆ.

ಕಂಪನಿಯು ದೇಶದಲ್ಲಿ ಈಗಾಗಲೇ ಡಿಫೆಂಡರ್‌ 110 ಮಾರಾಟ ಮಾಡುತ್ತಿದೆ. ‘ಡಿಫೆಂಡರ್‌ 110 ಬೇಡಿಕೆಯು ಉತ್ತಮವಾಗಿ ಇರಲಿದೆ. ಈಗ ಡಿಫೆಂಡರ್‌ 90 ಮಾದರಿಯನ್ನು ಪರಿಚಯಿಸಿರುವುದರಿಂದ ಡಿಫೆಂಡರ್‌ ವ್ಯಾಪ್ತಿ ಮತ್ತು ಲ್ಯಾಂಡ್ ರೋವರ್‌ ಬ್ರ್ಯಾಂಡ್‌ ಇನ್ನಷ್ಟು ವಿಸ್ತರಣೆ ಆಗಲಿದೆ’ ಎಂದು ಜೆಎಲ್‌ಆರ್‌ ಇಂಡಿಯಾದ ಅಧ್ಯಕ್ಷ ರೋಹಿತ್‌ ಸೂರಿ ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು