ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ಡೀಲರ್‌ಶಿಪ್‌: ಉದ್ಯೋಗ ಕಡಿತ

ನೆರವಿಗೆ ಧಾವಿಸಲು ಸರ್ಕಾರಕ್ಕೆ ಒಕ್ಕೂಟದ ಮೊರೆ
Last Updated 4 ಆಗಸ್ಟ್ 2019, 19:55 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿರುವ ವಾಹನಗಳ ಡೀಲರ್‌ಶಿಪ್‌ ಮಟ್ಟದಲ್ಲಿ ಮೂರು ತಿಂಗಳಿನಲ್ಲಿ 2 ಲಕ್ಷ ಉದ್ಯೋಗ ಕಡಿತವಾಗಿದೆ ಎಂದು ವಾಹನ ವಿತರಕರ ಸಂಘದ ಒಕ್ಕೂಟವು (ಎಫ್‌ಎಡಿಎ) ತಿಳಿಸಿದೆ.

ವಾಹನಗಳ ಮಾರಾಟದಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆ ಕಂಡುಬರುತ್ತಿದೆ. ಹೀಗಾಗಿ ಚಿಲ್ಲರೆ ಮಾರಾಟಗಾರರು ಸಿಬ್ಬಂದಿ ಕಡಿತದ ಪ್ರಕ್ರಿಯೆ ಆರಂಭಿಸಿದ್ದಾರೆ. ಸದ್ಯದ ಮಟ್ಟಿಗೆ ಉದ್ಯಮ ಚೇತರಿಸಿಕೊಳ್ಳಲು ಯಾವುದೇ ಸೂಚನೆ ಕಂಡುಬರುತ್ತಿಲ್ಲ. ಹೀಗಾಗಿ ಇನ್ನೂ ಹೆಚ್ಚಿನ ಉದ್ಯೋಗ ಕಡಿತವಾಗಲಿದ್ದು, ಷೋರೂಂಗಳ‌ನ್ನು ಮುಚ್ಚುವ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ ಎಂದು ಒಕ್ಕೂಟ ಆತಂಕ ವ್ಯಕ್ತಪಡಿಸಿದೆ.

‘ಮೂರು ತಿಂಗಳಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಕಡಿತ ಆಗಿದೆ. ಮೇ ತಿಂಗಳಿನಿಂದ ಉದ್ಯೋಗ ಕಡಿತ ಪ್ರಕ್ರಿಯೆ ಆರಂಭವಾಗಿದೆ’ ಎಂದು ಒಕ್ಕೂಟದ ಅಧ್ಯಕ್ಷ ಆಶಿಶ್‌ ಹರ್ಷರಾಜ್‌ ಕಾಳೆ ತಿಳಿಸಿದ್ದಾರೆ.

‘ಸದ್ಯ ಆಗಿರುವ ಉದ್ಯೋಗ ಕಡಿತ ಮಾರಾಟಕ್ಕೆ ಸಂಬಂಧಿಸಿದ್ದಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಉದ್ಯಮದಲ್ಲಿನ ತಂತ್ರಜ್ಞಾನ ಕೆಲಸಕ್ಕೂ ಕುತ್ತು ಬರಲಿದೆ. ಮಾರಾಟ ಕಡಿಮೆಯಾದರೆ, ಸೇವೆಯ ಪ್ರಮಾಣವೂ ಕಡಿಮೆಯಾಗುತ್ತದೆ’ ಎಂದು ಅವರು ವಿವರಿಸಿದ್ದಾರೆ.

ಕೇಂದ್ರದ ನೆರವಿಗೆ ಒತ್ತಾಯ: ‘ಕೇಂದ್ರ ಸರ್ಕಾರ ತಕ್ಷಣವೇ ಮಧ್ಯಪ್ರವೇಶ ಮಾಡಬೇಕು. ಜಿಎಸ್‌ಟಿ ದರ ತಗ್ಗಿಸುವ ಮೂಲಕ ವಾಹನ ಉದ್ಯಮದ ಚೇತರಿಕೆಗೆ ನೆರವಾಗಬೇಕು’ ಎಂದು ಕಾಳೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT