ಗುರುವಾರ , ಅಕ್ಟೋಬರ್ 22, 2020
27 °C

ಕಲ್ಯಾಣ್‌ ಜುವೆಲರ್ಸ್‌ನಿಂದ ಹಬ್ಬದ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತ್ರಿಶೂರ್‌: ಸಾಲು ಸಾಲು ಹಬ್ಬಗಳು ಬರುತ್ತಿರುವುದರಿಂದ ಕಲ್ಯಾಣ್‌ ಜುವೆಲರ್ಸ್‌ ಸಂಸ್ಥೆಯು ಹಬ್ಬದ ರಿಯಾಯಿತಿ ಮತ್ತು ಕೊಡುಗೆಗಳನ್ನು ಘೋಷಿಸಿದೆ.

ಕಲ್ಯಾಣ್ ಜುವೆಲರ್ಸ್‌ನಲ್ಲಿ ಚಿನ್ನಾಭರಣ ಖರೀದಿಸುವ ಗ್ರಾಹಕರು ತಮ್ಮ ಖರೀದಿಗೆ ಅನುಗುಣವಾಗಿ ಸಿಗುವ ಉಚಿತ ಗಿಫ್ಟ್‌ ವೋಚರ್‌ಗಳನ್ನು ತಕ್ಷಣವೇ ಮರಳಿಸಿ ನಗದಾಗಿಸಿಕೊಳ್ಳಬಹುದು. ಚಿನ್ನಾಭರಣಗಳ ವಿಶೇಷ ಬೆಲೆ ಕಡಿತಕ್ಕೆ (ಡಿಸ್ಕೌಂಟ್‌) ಪ್ರತಿಯಾಗಿ ಈ ವೋಚರ್‌ಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಈ ಕೊಡುಗೆಯು ನವೆಂಬರ್‌ 30ರವರೆಗೆ ಜಾರಿಯಲ್ಲಿರಲಿದೆ ಎಂದು ತಿಳಿಸಿದೆ.

ಧನ್‌ತೇರಸ್‌ಗೆ ಮುಂಗಡ ಬುಕಿಂಗ್‌ಅನ್ನೂ ಅದು ಪ್ರಕಟಿಸಿದೆ. ಇದು ಚಿನ್ನದ ದರದಲ್ಲಿ ಆಗುವ ಏರಿಳಿತದ ವಿರುದ್ಧ ಗ್ರಾಹಕರಿಗೆ ರಕ್ಷಣೆ ಒದಗಿಸಲಿದೆ. ಗ್ರಾಹಕರು ತಾವು ಖರೀದಿಸಲು ಉದ್ದೇಶಿಸಿದ ಚಿನ್ನಾಭರಣದ ಮೌಲ್ಯದ ಶೇ 20ರಷ್ಟು ಮೊತ್ತವನ್ನು ಮುಂಗಡವಾಗಿ ಪಾವತಿಸಿ, ಈ ಸೌಲಭ್ಯ ಪಡೆದುಕೊಳ್ಳಬಹುದು. ಈ ಕೊಡುಗೆಯು ಇದೇ ತಿಂಗಳ 20ರಂದು ಕೊನೆಗೊಳ್ಳಲಿದೆ.

‘ನವರಾತ್ರಿ ಮತ್ತು ದೀಪಾವಳಿ ಹಬ್ಬಗಳಿಗೆ ವಿಶೇಷ ಮಹತ್ವ ಇದೆ. ಆಕರ್ಷಕ ರಿಯಾಯಿತಿ ಮತ್ತು ವಿಶೇಷ ಕೊಡುಗೆಗಳ ನೆರವಿನಿಂದ ಗ್ರಾಹಕರು ತಮ್ಮ ಖರೀದಿಯಿಂದ ಗರಿಷ್ಠ ಪ್ರಯೋಜನ ಪಡೆದುಕೊಳ್ಳುವಂತೆ ಮಾಡಲು ಕಲ್ಯಾಣ್‌ ಜುವೆಲರ್ಸ್‌ ವಿಶೇಷ ಗಮನ ಹರಿಸಿದೆ. ಮಳಿಗೆಗಳಲ್ಲಿ ಮತ್ತು ಆನ್‌ಲೈನ್‌ನಲ್ಲಿಯೂ ಖರೀದಿ ನಡೆಸಬಹುದಾಗಿದೆ’ ಎಂದು ಕಲ್ಯಾನ್‌ ಜುವೆಲರ್ಸ್‌ನ ಅಧ್ಯಕ್ಷ ಟಿ.ಎಸ್‌. ಕಲ್ಯಾಣ್‌ ರಾಮನ್‌ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.