ಮಂಗಳೂರು: ಕರ್ಣಾಟಕ ಬ್ಯಾಂಕ್‌ನ ನಿವ್ವಳ ಲಾಭದಲ್ಲಿ ಎರಡನೇ ತ್ರೈಮಾಸಿಕದಲ್ಲಿ ಶೇಕಡ 12.69ರಷ್ಟು ಹೆಚ್ಚಳ ಆಗಿದ್ದು, ₹119.35 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್ ₹105.91 ಕೋಟಿ ಲಾಭ ಗಳಿಸಿತ್ತು.
ಬ್ಯಾಂಕಿನ ಮುಂಗಡ ಮತ್ತು ಠೇವಣಿಗಳ ಅನುಪಾತ (ಸಿ.ಡಿ. ರೆಶೋ) ಶೇಕಡ 74.18ರಷ್ಟಿದೆ. ಜಿಎನ್‌ಪಿಎ ಇಳಿಕೆ ಕಂಡಿದ್ದು, ಶೇಕಡ 3.97ರಷ್ಟಿವೆ. ಎನ್‌ಎನ್‌ಪಿಎ ಶೇಕಡ 2.21ರಷ್ಟಕ್ಕೆ ಇಳಿಕೆಯಾಗಿದೆ. ಈ ಮೊದಲು ಅದು ಶೇ 3.48ರಷ್ಟಿತ್ತು.
‘ಬ್ಯಾಂಕಿನ ಅಭಿವೃದ್ಧಿಯ ಗ್ರಾಫ್ ಎಲ್ಲ ಕ್ಷೇತ್ರಗಳಲ್ಲೂ ಮೇಲ್ಮುಖವಾಗಿ ಬೆಳೆಯುತ್ತಿರುವುದು ಅತ್ಯಂತ ಮಹತ್ವದ್ದು. ಬ್ಯಾಂಕಿನ ಮೂಲ ತತ್ವಗಳು ಗಟ್ಟಿಗೊಂಡಿವೆ’ ಎಂದು ಬ್ಯಾಂಕಿನ ಸಿಇಒ ಮಹಾಬಲೇಶ್ವರ ಎಂ.ಎಸ್. ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.