ಬೆಂಗಳೂರು: ಬಾಶ್ ಮತ್ತು ಸೀಮನ್ಸ್ ಸಹಯೋಗದ ಬಿಎಸ್ಎಚ್ ಹೋಮ್ ಅಪ್ಲೈಯನ್ಸಸ್ ಸಂಸ್ಥೆಯ ಮೂಲಕ ಹೊರತಂದಿರುವ ಗೃಹೋಪಯೋಗಿ ಸಾಧನಗಳಿಗೆ ರಾಜ್ಯದಲ್ಲಿ ಗರಿಷ್ಠ ಬೇಡಿಕೆಯಿದ್ದು, ಭಾರತದಲ್ಲಿ ಕರ್ನಾಟಕದಲ್ಲೇ ಗರಿಷ್ಠ ವಹಿವಾಟು ನಡೆಯುತ್ತಿದೆ ಎಂದು ಸಂಸ್ಥೆಯ ಎಂಡಿ, ಸಿಇಒ ಸೈಫ್ ಖಾನ್ ತಿಳಿಸಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರದಲ್ಲಿ ಅತ್ಯಾಧುನಿಕ ಮತ್ತು ಪ್ರೀಮಿಯಂ ಸಾಧನಗಳ ಬಾಶ್ ಬ್ರಾಂಡ್ ಮಳಿಗೆಯನ್ನು ಇತ್ತೀಚೆಗೆ ಉದ್ಘಾಟಿಸಲಾಗಿದೆ.
ವಿಶೇಷವಾಗಿ ಪೂರ್ಣ ಸ್ವಯಂಚಾಲಿತ ಫ್ರಂಟ್ ಲೋಡ್ ವಾಷಿಂಗ್ ಮೆಶಿನ್ ಹಾಗೂ ಪಾತ್ರೆ ತೊಳೆಯುವ ಡಿಶ್ ವಾಶರ್‌ಗಳಿಗೆ ಕರ್ನಾಟಕದಲ್ಲಿ ಗರಿಷ್ಠ ಬೇಡಿಕೆಯಿದೆ ಎಂದವರು ಹೇಳಿದ್ದಾರೆ. ಬೆಂಗಳೂರಿನಲ್ಲಿ 16, ಮೈಸೂರು ಹಾಗೂ ಮಂಗಳೂರಿನಲ್ಲಿ ತಲಾ ಒಂದೊಂದು ಬಾಶ್ ಮಳಿಗೆಗಳಿದ್ದು, ಸೀಮನ್ಸ್‌ನ 4 ಮಳಿಗೆಗಳು ಬೆಂಗಳೂರಿನಲ್ಲಿವೆ.
ಜರ್ಮನ್ ತಂತ್ರಜ್ಞಾನಕ್ಕೆ ಹೆಸರಾಗಿರುವ ಬಾಶ್, ಸೀಮನ್ಸ್ ಮತ್ತು ಗ್ಯಾಜಿನಾವ್ (Gaggenau) ಬ್ರ್ಯಾಂಡ್‌ಗಳ ಸಹಯೋಗದಲ್ಲಿ ಬಿಎಸ್‌ಎಚ್ ಸಂಸ್ಥೆಯು ಅತ್ಯಾಧುನಿಕ ಐಒಟಿ ವೈಶಿಷ್ಟ್ಯಗಳುಳ್ಳ ಸ್ಮಾರ್ಟ್ ಗೃಹೋಪಯೋಗಿ ಉತ್ಪನ್ನಗಳನ್ನು ತಯಾರಿಸುತ್ತಿದೆ. ಬೆಂಗಳೂರಿನಲ್ಲಿ ಶೀಘ್ರದಲ್ಲೇ ಗ್ರಾಹಕ ಅನುಭವ ಹಾಗೂ ವಿನ್ಯಾಸ ಕೇಂದ್ರವನ್ನು ಆರಂಭಿಸಲಾಗುತ್ತಿದೆ ಎಂದು ಸೈಫ್ ಖಾನ್ ತಿಳಿಸಿದ್ದಾರೆ.