ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಐಒಸಿಎಲ್‌: 3 ಹೊಸ ಘಟಕ

Last Updated 3 ಡಿಸೆಂಬರ್ 2018, 17:44 IST
ಅಕ್ಷರ ಗಾತ್ರ

ಮಂಗಳೂರು: ಕುದುರೆಮುಖ ಕಬ್ಬಿಣ ಅದಿರು ಕಾರ್ಖಾನೆಯು (ಕೆಐಒಸಿಎಲ್‌) ವಾರ್ಷಿಕ 2 ದಶಲಕ್ಷ ಟನ್‌ ಸಾಮರ್ಥ್ಯದ ಮೂರು ಘಟಕಗಳನ್ನು ವಿಶಾಖಪಟ್ಟಣ, ಬೊಕಾರೊ ಮತ್ತು ಭಿಲಾಯಿಯಲ್ಲಿ ಸ್ಥಾಪಿಸಲಿದೆ.

‘ಕೆಐಒಸಿಎಲ್‌’ನ ಅಧ್ಯಕ್ಷ ಎಂ.ವಿ. ಸುಬ್ಬರಾವ್‌ ಅವರು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಕೆಐಒಸಿಎಲ್‌ ನಿರ್ದೇಶಕರ ಮಂಡಳಿಯು ಈಗಾಗಲೇ ವಿಶಾಖಪಟ್ಟಣ ಘಟಕದ ಡಿಪಿಆರ್‌ಗೆ (ವಿಸ್ತೃತ ಯೋಜನಾ ವರದಿ) ಅಂಗೀಕಾರ ನೀಡಿದೆ. ಅಂದಾಜು ಒಂದು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಈ ಘಟಕ ಅಸ್ತಿತ್ವಕ್ಕೆ ಬರಲಿದೆ. ‘ಕೆಐಒಸಿಎಲ್‌’ ಕಂಪನಿಯು ವಿಶಾಖಪಟ್ಟಣ ಸ್ಟೀಲ್‌ ಪ್ಲಾಂಟ್‌ಗೆ (ವಿಎಸ್‌ಪಿ) ಸೇರಿದ ರಾಷ್ಟ್ರೀಯ ಇಸ್ಪಟ್‌ ನಿಗಮದ (ಆರ್‌ಐಎನ್‌ಎಲ್‌) ಜೊತೆಗೆ ಹಿಂದಿನ ವರ್ಷ ಜಂಟಿ ಒಪ್ಪಂದ ಮಾಡಿಕೊಂಡಿದ್ದು, ಅಲ್ಲಿ ಫ್ಲಕ್ಸ್‌ ಪೆಲೆಟ್‌ ಪ್ಲಾಂಟ್‌ ಸ್ಥಾಪನೆಯಾಗಲಿದೆ. 2021ಕ್ಕೆ ಈ ಘಟಕವು ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ. ಇದಕ್ಕಾಗಿ ‘ಆರ್‌ಐಎನ್‌ಎಲ್‌‘ 75 ಎಕರೆ ಜಾಗವನ್ನು ಗುರುತಿಸಿದೆ ಎಂದು ಅವರು ಹೇಳಿದರು.

‘ಬೊಕಾರೊ ಮತ್ತು ಭಿಲಾಯಿಯಲ್ಲಿ ‘ಬಿಎಫ್‌ ಗ್ರೇಡ್‌ ಪೆಲೆಟ್‌ ಪ್ಲಾಂಟ್‌’ ಸ್ಥಾಪಿಸುವ ನಿಟ್ಟಿನಲ್ಲಿ ಮುಂದಿನ ವಾರ ‘ಕೆಐಒಸಿಎಲ್‌‘ ಭಾರತೀಯ ಉಕ್ಕು ಪ್ರಾಧಿಕಾರದ ಜೊತೆ ಒಪ್ಪಂದ ಮಾಡಿಕೊಳ್ಳಲಿದೆ. ಈ ಎರಡೂ ಘಟಕಗಳು 2022 –2023ರ ಸಾಲಿನಲ್ಲಿ ಕಾರ್ಯಾರಂಭ ಮಾಡಲಿವೆ.

‘ಅದಿರಿನ ಉಂಡೆಗಳನ್ನು ಮಂಗಳೂರಿಗೆ ತರಲು ‘ಕೆಐಒಸಿಎಲ್‌’ ಪ್ರತಿ ಟನ್‌ಗೆ ಕನಿಷ್ಠ ₹ 2 ಸಾವಿರ ವ್ಯಯಿಸಬೇಕಾಗುತ್ತದೆ. ಮೂರು ಹೊಸ ಘಟಕಗಳನ್ನು ಸ್ಥಾಪಿಸುವುದರಿಂದ ಈ ಸಾಗಾಣಿಕಾ ವೆಚ್ಚ ಉಳಿತಾಯವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT