ಮಂಗಳವಾರ, ಜುಲೈ 14, 2020
27 °C

ಕಿರಣ್‌ ಶಾಗೆ ‘ಇವೈ’ ಜಾಗತಿಕ ಉದ್ಯಮಿ ಪ್ರಶಸ್ತಿ

KIRAN WINS EY AWARD Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಜೈವಿಕ ತಂತ್ರಜ್ಞಾನ ಕಂಪನಿ ಬಯೋಕಾನ್‍ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ, 2020ರ ಸಾಲಿನ ಪ್ರತಿಷ್ಠಿತ ಅರ್ನ್ಸ್ಟ್‌ ಆ್ಯಂಡ್‌ ಯಂಗ್ (ಇವೈ)  ಜಾಗತಿಕ  ಉದ್ಯಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

41 ದೇಶಗಳ 46 ‘ಇವೈ’ ವರ್ಷದ ಉದ್ಯಮಿ ಪ್ರಶಸ್ತಿ ಪುರಸ್ಕೃತರ ಪೈಕಿ ಇವರಿಗೆ ಜಾಗತಿಕ ಪ್ರಶಸ್ತಿ ಒಲಿದಿದೆ.

ಈ ಪ್ರಶಸ್ತಿಯ 20 ವರ್ಷಗಳ ಇತಿಹಾಸದಲ್ಲಿ ಈ ಗೌರವಕ್ಕೆ ಪಾತ್ರರಾದ ದೇಶದ ಮೊದಲ  ಮತ್ತು ವಿಶ್ವದ ಎರಡನೇ ಮಹಿಳೆ ಇವರಾಗಿದ್ದಾರೆ. ಪ್ರಶಸ್ತಿ ಪಡೆದ ಮೂರನೇ ಭಾರತೀಯರು ಇವರಾಗಿದ್ದಾರೆ. ಕೋಟಕ್‌ ಮಹೀಂದ್ರಾದ ಉದಯ್‌ ಕೋಟಕ್‌ (2014) ಮತ್ತು ಇನ್ಫೊಸಿಸ್‌ನ ಸಹ ಸ್ಥಾಪಕ ಎನ್‌. ಆರ್‌. ನಾರಾಯಣಮೂರ್ತಿ ಅವರು 2005ರಲ್ಲಿ ಈ ಗೌರವ ಪಡೆದಿದ್ದಾರೆ.

ಸಿಂಗಪುರದ ಹೈಫ್ಲಕ್ಸ್‌ ಲಿಮಿಟೆಡ್‌ನ ಒಲಿವಿಯಾ ಲಮ್‌ ಅವರು 2011ರಲ್ಲಿ ಈ ಗೌರವಕ್ಕೆ ಪಾತ್ರರಾಗಿದ್ದರು. ಗುರುವಾರ ರಾತ್ರಿ ವರ್ಚುವಲ್‌ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿತ್ತು.

 2019ರ ಸಾಲಿನ  ದೇಶದ ‘ಇವೈ’ ವರ್ಷದ ಉದ್ಯಮಿ ಪ್ರಶಸ್ತಿಗೆ ಕಿರಣ್‌ ಅವರು  ಈ ವರ್ಷದ ಫೆಬ್ರುವರಿಯಲ್ಲಿ ಭಾಜನರಾಗಿದ್ದರು. ‘ಇವೈ’ ಜಾಗತಿಕ ಉದ್ಯಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

‘ಬಯೊಕಾನ್‌ ವಹಿವಾಟಿನಲ್ಲಿ ಜಾಗತಿಕ ಆರೋಗ್ಯ ರಕ್ಷಣೆಗೆ ಒತ್ತು ನೀಡಲಾಗಿದೆ.  ಜೀವ ರಕ್ಷಕ ಔಷಧಿಗಳು ಎಲ್ಲೆಡೆ ದೊರೆಯಬೇಕು ಎನ್ನುವುದು ಕಂಪನಿಯ ಧ್ಯೇಯವಾಗಿದೆ. ಉದ್ಯಮಿಯಾಗಿ ಷೇರುದಾರರ ಸಂಪತ್ತು ಹೆಚ್ಚಿಸುವುದಕ್ಕಿಂತ ನನ್ನ ಜವಾಬ್ದಾರಿ ಹೆಚ್ಚಿಗೆ ಇದೆ’ ಎಂದು ಕಿರಣ್‌ ಮಜುಂದಾರ್ ಶಾ ಹೇಳಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.