ಸೋಮವಾರ, ಜನವರಿ 25, 2021
18 °C

ಡಿಸೆಂಬರ್‌ಗೆ ಮುನ್ನ ರಾಷ್ಟ್ರೀಯ ಉದ್ಯೋಗ ನೀತಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ರಾಷ್ಟ್ರೀಯ ಉದ್ಯೋಗ ನೀತಿಗೆ (ಎನ್‌ಇಪಿ) ಈ ವರ್ಷದ ಡಿಸೆಂಬರ್‌ಗೆ ಮೊದಲು ಅಂತಿಮ ರೂಪ ನೀಡುವ ನಿರೀಕ್ಷೆ ಇದೆ.

ಕೌಶಲ ಅಭಿವೃದ್ಧಿ, ಉದ್ಯೋಗವನ್ನು ಹೆಚ್ಚಿನ ಪ್ರಮಾಣದಲ್ಲಿ ಸೃಷ್ಟಿಸುವ ವಲಯಗಳಲ್ಲಿ ಹೆಚ್ಚಿನ ಹೂಡಿಕೆ ತರುವುದು ಮತ್ತು ನೀತಿ ನಿರೂಪಣೆಯಲ್ಲಿನ ಇತರ ಕೆಲವು ಕ್ರಮಗಳ ಮೂಲಕ ಉದ್ಯೋಗ ಅವಕಾಶಗಳನ್ನು ಎನ್‌ಇಪಿ ಹೆಚ್ಚಿಸುವ ನಿರೀಕ್ಷೆ ಇದೆ.

ಕೈಗಾರಿಕಾ ಸಂಬಂಧಗಳು, ಸಾಮಾಜಿಕ ಭದ್ರತೆ ಹಾಗೂ ‘ಕೆಲಸದ ಸ್ಥಳಗಳಲ್ಲಿ ಆರೋಗ್ಯ ರಕ್ಷಣೆ ಮತ್ತು ಕೆಲಸದ ಸ್ಥಿತಿ’ಗೆ ಸಂಬಂಧಿಸಿದ ಮೂರು ಕಾರ್ಮಿಕ ಸಂಹಿತೆಗಳನ್ನು ಸಂಸತ್ತು ಹಿಂದಿನ ವರ್ಷ ಅನುಮೋದಿಸಿದೆ. ವೇತನ ಸಂಹಿತೆ ಕೂಡ ಸಂಸತ್ತಿನ ಅನುಮೋದನೆ ಪಡೆದುಕೊಂಡಿದ್ದು, ಇದಕ್ಕೆ ಸಂಬಂಧಿಸಿದ ನಿಯಮಗಳನ್ನು ರೂಪಿಸಲಾಗಿದೆ.

ನಾಲ್ಕೂ ಸಂಹಿತೆಗಳು ಏಪ್ರಿಲ್ 1ರಿಂದ ಜಾರಿಗೆ ಬರುವ ನಿರೀಕ್ಷೆ ಇದೆ. ದೇಶದಲ್ಲಿ 50 ಕೋಟಿಗಿಂತ ಹೆಚ್ಚಿರುವ ಕೆಲಸಗಾರರ ಸಾಮಾಜಿಕ ಭದ್ರತೆ ಮತ್ತು ಇತರ ಸುರಕ್ಷತೆಗಳಿಗೆ ಸಂಬಂಧಿಸಿದಂತೆ ಕಾನೂನಿನ ಚೌಕಟ್ಟನ್ನು ಈ ನಾಲ್ಕು ಸಂಹಿತೆಗಳು ಒದಗಿಸಲಿವೆ.

ಕಾರ್ಮಿಕರಿಗೆ ಸಂಬಂಧಿಸಿದ ನಾಲ್ಕು ಸಮೀಕ್ಷೆಗಳನ್ನು ಕಾರ್ಮಿಕ ಬ್ಯೂರೊ ನಡೆಸಲಿದ್ದು, ಅದರಲ್ಲಿ ಕಂಡುಬರುವ ಅಂಶಗಳನ್ನು ಆಧರಿಸಿ ಎನ್‌ಇಪಿ ಅಂತಿಮ ರೂಪ ಪಡೆದುಕೊಳ್ಳಲಿದೆ ಎಂದು ಬ್ಯೂರೊದ ಮಹಾನಿರ್ದೇಶಕರಾದ ಡಿ.ಎಸ್. ನೇಗಿ ತಿಳಿಸಿದರು. ಇದಾದ ನಂತರ, ಎನ್‌ಇಪಿಯು ಕೇಂದ್ರ ಸಂಪುಟದ ಅನುಮೋದನೆಗೆ ರವಾನೆ ಆಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು