ನವದೆಹಲಿ: ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಪುಣೇರಿ ಪಲ್ಟನ್ ತಂಡವು ಬುಧವಾರ ತೆಲುಗು ಟೈಟನ್ಸ್ ತಂಡವನ್ನು ಮಣಿಸಿ ಪ್ರೊ ಕಬಡ್ಡಿ ಲೀಗ್ನಲ್ಲಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿತು.

ಇಲ್ಲಿನ ತ್ಯಾಗರಾಜ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕ್ವಾಲಿಫೈಯರ್ 2 ಪಂದ್ಯದಲ್ಲಿ ಅಸ್ಲಾಂ ಇನಾಮದಾರ್ ಬಳಗವು 50–45ರಿಂದ ದೀಪಕ್ ಹೂಡಾ ಪಡೆಯನ್ನು ಸೋಲಿಸಿತು. ಅದರೊಂದಿಗೆ, ಶುಕ್ರವಾರ ನಡೆಯಲಿರುವ ಫೈನಲ್ನಲ್ಲಿ ಪುಣೇರಿ–ದಬಂಗ್ ಡೆಲ್ಲಿ ತಂಡಗಳ ಹಣಾಹಣಿಗೆ ವೇದಿಕೆ ಸಿದ್ಧವಾಯಿತು.

ಒಂದು ಹಂತದಲ್ಲಿ 1–10ರಿಂದ ಹಿಂದಿದ್ದ ಅಸ್ಲಾಂ ಪಡೆಯು, ನಂತರ ಪುಟಿದೆದ್ದು ವಿರಾಮದ ವೇಳೆಗೆ 20–24ಕ್ಕೆ ಹಿನ್ನಡೆಯನ್ನು ತಗ್ಗಿಸಿಕೊಂಡರು. ನಂತರ ಆದಿತ್ಯ ಶಿಂದೆ–ಪಂಕಜ್ ಮೋಹಿತ್ ಜೋಡಿ ಎದುರಾಳಿ ತಂಡದ ಮೇಲೆ ಪ್ರಾಬಲ್ಯ ಸಾಧಿಸಿತು.

ಆದಿತ್ಯ ಅವರು ರೇಡಿಂಗ್ನಲ್ಲಿ 21 ಅಂಕ ಬಾಚುವ ಮೂಲಕ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಪಂಕಜ್ ‘ಸೂಪರ್ ಟೆನ್’ ಸಾಧನೆಯೊಂದಿಗೆ ಆದಿತ್ಯ ಅವರಿಗೆ ಉತ್ತಮ ಬೆಂಬಲ ನೀಡಿದರು. ಟೈಟನ್ಸ್ ತಂಡದ ನಾಯಕ ದೀಪಕ್ (22 ಪಾಯಿಂಟ್ಸ್) ಎಂದಿನಂತೆ ಉತ್ತಮ ಪ್ರದರ್ಶನ ನೀಡಿದರಾದರೂ, ಅವರ ಪ್ರಯತ್ನಕ್ಕೆ ಯಶಸ್ಸು ಸಿಗಲಿಲ್ಲ.

ಲೀಗ್ನ 10ನೇ ಆವೃತ್ತಿಯ ಚಾಂಪಿಯನ್ ಪುಣೇರಿ ತಂಡವು ಕಳೆದ ನಾಲ್ಕು ಆವೃತ್ತಿಗಳಲ್ಲಿ ಮೂರನೇ ಬಾರಿಗೆ ಪ್ರಶಸ್ತಿ ಸುತ್ತು ತಲುಪಿದ ಸಾಧನೆ ಮಾಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.