ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜು ನಾಳೆ (ಡಿಸೆಂಬರ್ 16) ಅಬುಧಾಬಿಯಲ್ಲಿ ನಡೆಯಲಿದೆ. ಈ ನಡುವೆ ಯಾವ ಆಟಗಾರನನ್ನು ಖರೀದಿಸಬೇಕು? ತಂಡಕ್ಕೆ ಯಾರ ಅಗತ್ಯವಿದೆ? ಎಂಬುದರ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ವಿಶೇಷವಾಗಿ, ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತ್ತ ನೈಟ್ ರೈಡರ್ಸ್ ಫ್ರಾಂಚೈಸಿಗಳು ಪರ್ಸ್ನಲ್ಲಿ ಅತ್ಯಧಿಕ ಮೊತ್ತ ಹೊಂದಿದ್ದು, ತಾರಾ ಆಟಗಾರರ ಮೇಲೆ ಕಣ್ಣಿಟ್ಟಿವೆ.

10 ತಂಡಗಳ ಬಳಿ ಒಟ್ಟು ₹237.55 ಕೋಟಿ ಹಣ ಹೊಂದಿವೆ. ಅದರಲ್ಲಿ 77 ಆಟಗಾರರನ್ನು ಖರೀದಿಸಬೇಕು. 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕೇವಲ ₹2.75 ಕೋಟಿ ಹಣ ಹೊಂದಿದ್ದು, ಬಿಡ್ನಲ್ಲಿ ದೊಡ್ಡ ಪಾತ್ರ ವಹಿಸುವ ಸಾಧ್ಯತೆ ಕಡಿಮೆ ಇದೆ.

ಆದರೆ, ಮಿನಿ ಹರಾಜಿನಲ್ಲಿ ₹64.30 ಕೋಟಿ ಹಣ ಹೊಂದಿರುವ ಕೆಕೆಆರ್ ಹಾಗೂ ₹43.40 ಕೋಟಿ ಹೊಂದಿರುವ ಸಿಎಸ್ಕೆ ತಂಡಗಳು ದೊಡ್ಡ ಆಟಗಾರರಾದ ಕ್ಯಾಮೆರೂನ್ ಗ್ರೀನ್, ಭಾರತದ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಮತ್ತು ಇಂಗ್ಲೆಂಡ್ನ ಲಿಯಾಮ್ ಲಿವಿಂಗ್ಸ್ಟೋನ್ರಂತಹ ತಾರಾ ಆಟಗಾರರನ್ನು ಖರೀದಿಸಲು ಪೈಪೋಟಿ ನಡೆಸುವ ಸಾಧ್ಯತೆ ಇದೆ.

ಪೇಸ್ ಬೌಲಿಂಗ್ ಆಲ್ರೌಂಡರ್ಗಳಾದ ಕ್ಯಾಮೆರೂನ್ ಗ್ರೀನ್, ವೆಂಕಟೇಶ್ ಅಯ್ಯರ್ ಮತ್ತು ವೆಸ್ಟ್ ಇಂಡೀಸ್ನ ಜೇಸನ್ ಹೋಲ್ಡರ್ ₹2 ಕೋಟಿ ಮೂಲ ಬೆಲೆ ಹೊಂದಿದ್ದಾರೆ. ಮಾತ್ರವಲ್ಲ, ಇವರುಗಳು ಬಿಡ್ಡಿಂಗ್ನಲ್ಲಿ ಉತ್ತಮ ಬೆಲೆ ಪಡೆಯುವ ಸಾಧ್ಯತೆ ಇದೆ.
.IPL Auction| 350 ಆಟಗಾರರ ಅಂತಿಮ ಪಟ್ಟಿ: ₹2 ಕೋಟಿ ಮೂಲ ಬೆಲೆಯ ಆಟಗಾರರು ಇವರೇ.ಐಪಿಎಲ್ ಬ್ರ್ಯಾಂಡ್ ಮೌಲ್ಯದಲ್ಲಿ CSK ಹಿಂದಿಕ್ಕಿದ RCB: ಯಾವ ತಂಡಕ್ಕೆ ಅಗ್ರಸ್ಥಾನ?.
ಐಪಿಎಲ್ ಅಂಕಿಅಂಶ ನೋಡಿದರೆ, ಗ್ರೀನ್ ಅವರು ಆಡಿರುವ 29 ಪಂದ್ಯಗಳಲ್ಲಿ 704 ರನ್ಗಳು ಮತ್ತು 16 ವಿಕೆಟ್ಗಳನ್ನು ಪಡೆದಿದ್ದಾರೆ. ಹಾಗಾಗಿ ಮಿನಿ ಹರಾಜಿನಲ್ಲಿ ಇವರು ದುಬಾರಿ ಹಣ ಪಡೆಯುವ ಸಾಧ್ಯತೆ ಇದೆ.

ಕಳೆದ ವರ್ಷ ಐಪಿಎಲ್ ಮೆಗಾ ಹರಾಜಿನಲ್ಲಿ ₹23.75 ಕೋಟಿ ಮೊತ್ತಕ್ಕೆ ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಸೇರಿದ್ದ ವೆಂಕಟೇಶ್ ಅಯ್ಯರ್ ಕಳೆದ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಈ ಬಾರಿ ವೆಂಕಟೇಶ್ ಅವರ ಮೇಲೆ ಆರ್ಸಿಬಿ ಸೇರಿದಂತೆ ಅನೇಕ ತಂಡಗಳು ಕಣ್ಣಿಟ್ಟಿವೆ.

ಗ್ರೀನ್ಗೆ ಸಿಗುತ್ತಾ 18 ಕೋಟಿ?

ಐಪಿಎಲ್ ಹರಾಜಿನಲ್ಲಿ ಅತಿ ಹೆಚ್ಚು ಹಣ ಪಡೆದ ವಿದೇಶಿ ಆಟಗಾರನಾಗುವ ಅವಕಾಶ ಗ್ರೀನ್ ಅವರಿಗೆ ಇದೆಯಾದರೂ, ಐಪಿಎಲ್ ಹೊಸ ನಿಯಮದ ಪ್ರಕಾರ ಅವರು ₹18 ಕೋಟಿ ಮಾತ್ರ ಪಡೆಯಬಹುದು.

ಐಪಿಎಲ್ನ ‘ಗರಿಷ್ಠ ಶುಲ್ಕ’ ನಿಯಮದ ಪ್ರಕಾರ, ಮಿನಿ ಹರಾಜಿನಲ್ಲಿ ವಿದೇಶಿ ಆಟಗಾರನ ಗರಿಷ್ಠ ಮೊತ್ತ ₹18 ಕೋಟಿ. ಕಳೆದ ವರ್ಷ ನಡೆದ ಮೆಗಾ ಹರಾಜಿನಲ್ಲಿ ₹27 ಕೋಟಿ ಪಡೆದಿದ್ದ ರಿಷಬ್ ಪಂತ್, ಐಪಿಎಲ್ ಇತಿಹಾಸದಲ್ಲಿ ಇದುವರೆಗಿನ ದುಬಾರಿ ಆಟಗಾರನಾಗಿದ್ದಾರೆ.

ಮಿನಿ ಹರಾಜಿನಲ್ಲಿ, ರೈಟ್ ಟು ಮ್ಯಾಚ್ (ಆರ್ಟಿಎಂ) ಕಾರ್ಡ್ ಬಳಸಲು ಯಾವುದೇ ಅವಕಾಶವಿರುವುದಿಲ್ಲ. ಹಾಗಾಗಿ, ಕೆಕೆಆರ್ ಫ್ರಾಂಚೈಸಿ ವೆಂಕಟೇಶ್ ಅಯ್ಯರ್ ಅವರನ್ನು ಮರಳಿ ಪಡೆಯಲು ಬಯಸಿದರೆ ಬಿಡ್ಡಿಂಗ್ನಲ್ಲಿ ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಲಿವಿಂಗ್ಸ್ಟೋನ್, ಡಿ ಕಾಕ್ಗೂ ಇದೆ ಹೆಚ್ಚಿನ ಬೇಡಿಕೆ

ಇಂಗ್ಲೆಂಡ್ನ ಲಿಯಾಮ್ ಲಿವಿಂಗ್ಸ್ಟೋನ್ ಹಾಗೂ ಭಾರತೀಯ ಪಿಚ್ಗಳಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಇಬ್ಬರೂ ಅತ್ಯಧಿಕ ಹಣ ಪಡೆಯುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.