ಗುರುವಾರ , ಜನವರಿ 28, 2021
18 °C

ಎಲ್‌ವಿಬಿ ಬಡ್ಡಿದರದಲ್ಲಿ ಸದ್ಯಕ್ಕೆ ಬದಲಿಲ್ಲ: ಡಿಬಿಎಸ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಲಕ್ಷ್ಮೀ ವಿಲಾಸ್‌ ಬ್ಯಾಂಕ್‌ನ (ಎಲ್‌ವಿಬಿ) ಉಳಿತಾಯ ಖಾತೆ ಮತ್ತು ನಿಶ್ಚಿತ ಅವಧಿ ಠೇವಣಿಗಳ ಮೇಲಿನ ಬಡ್ಡಿ ದರಗಳಲ್ಲಿ ಸದ್ಯಕ್ಕೆ ಬದಲಾವಣೆ ಇಲ್ಲ ಎಂದು ಡಿಬಿಎಸ್‌ ಬ್ಯಾಂಕ್‌ ಸೋಮವಾರ ಹೇಳಿದೆ.

ಡಿಬಿಎಸ್‌ ಹೋಲ್ಡಿಂಗ್ಸ್‌ ಲಿಮಿಟೆಡ್‌ನ ಒಡೆತನದ ಡಿಬಿಎಸ್‌ ಬ್ಯಾಂಕ್‌ ಇಂಡಿಯಾ ಲಿಮಿಟೆಡ್‌ನಲ್ಲಿ ಎಲ್‌ವಿಬಿ ವಿಲೀನ ಆಗಿದೆ. ಎಲ್‌ವಿಬಿ ಗ್ರಾಹಕರು ಬ್ಯಾಂಕಿಂಗ್‌ಗೆ ಸಂಬಂಧಿಸಿದ ಎಲ್ಲಾ ಸೇವೆಗಳನ್ನು ಬಳಸುವುದನ್ನು ಮುಂದುವರಿಸಬಹುದಾಗಿದೆ ಎಂದು ಅದು ತಿಳಿಸಿದೆ.

ನವೆಂಬರ್‌ 27ರಿಂದಲೇ ವಿಲೀನವು ಜಾರಿಗೆ ಬಂದಿದೆ. ಎಲ್‌ವಿಬಿ ಮೇಲೆ ಹೇರಿದ್ದ ನಿರ್ಬಂಧವು ಅದೇ ದಿನ ತೆರವಾಗಿದ್ದು, ತಕ್ಷಣದಿಂದಲೇ ಎಲ್ಲಾ ಶಾಖೆಗಳು, ಡಿಜಿಟಲ್‌ ವಹಿವಾಟುಗಳು ಮತ್ತು ಎಟಿಎಂಗಳು ಎಂದಿನಂತೆ ಕಾರ್ಯನಿರ್ವಹಿಸಲು ಆರಂಭಿಸಿವೆ ಎಂದು ಬ್ಯಾಂಕ್‌ ಹೇಳಿದೆ.

ಎಲ್‌ವಿಬಿಯಲ್ಲಿದ್ದ ಎಲ್ಲಾ ಸಿಬ್ಬಂದಿ ತಮ್ಮ ಸೇವೆಯನ್ನು ಮುಂದುವರಿಸಲಿದ್ದು, ಅವರು ಈಗ ಡಿಬಿಐಎಲ್‌ನ ಸಿಬ್ಬಂದಿಯಾಗಿದ್ದಾರೆ. ಎಲ್‌ವಿಬಿಯಲ್ಲಿದ್ದ ಸೇವೆಗೆ ಸಂಬಂಧಿಸಿದ ನಿಯಮಗಳೇ ಅನ್ವಯವಾಗಲಿವೆ ಎಂದೂ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು