ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LIC Housing Finance: ₹5 ಸಾವಿರ ಕೋಟಿ ಲಾಭ ಗಳಿಕೆ ನಿರೀಕ್ಷೆ

Published 25 ಫೆಬ್ರುವರಿ 2024, 15:24 IST
Last Updated 25 ಫೆಬ್ರುವರಿ 2024, 15:24 IST
ಅಕ್ಷರ ಗಾತ್ರ

ನವದೆಹಲಿ: ಸಾಲಕ್ಕೆ ಬೇಡಿಕೆ ಹೆಚ್ಚಳ ಮತ್ತು ವ್ಯವಹಾರದ ವಿಸ್ತರಣೆಯಿಂದಾಗಿ 2023-24ರ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದ ವೇಳೆಗೆ ಎಲ್‌ಐಸಿ ಹೌಸಿಂಗ್‌ ಫೈನಾನ್ಸ್‌ನ ನಿವ್ವಳ ಲಾಭವು ₹5 ಸಾವಿರ ಕೋಟಿ ಆಗಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ತ್ರಿಭುವನ್‌ ಅಧಿಕಾರಿ ತಿಳಿಸಿದ್ದಾರೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹2,891 ಕೋಟಿ ನಿವ್ವಳ ಲಾಭವನ್ನು ಕಂಪನಿ ಗಳಿಸಿತ್ತು ಎಂದು ಪಿಟಿಐಗೆ ತಿಳಿಸಿದ್ದಾರೆ. ಪ್ರಸಕ್ತ ಹಣಕಾಸು ವರ್ಷದ ಮೂರು ತ್ರೈಮಾಸಿಕದಲ್ಲಿ ಕಂಪನಿ ₹3,675 ಕೋಟಿ ನಿವ್ವಳ ಲಾಭ ಗಳಿಸಿದೆ. ಇದು ಕೊನೆಯ ತ್ರೈಮಾಸಿಕದ ವೇಳೆಗೆ ₹5 ಸಾವಿರ ಕೋಟಿಗೆ ಮುಟ್ಟುವ ಭರವಸೆ ಇದೆ ಎಂದು ಹೇಳಿದ್ದಾರೆ.

‘ಎರಡು ಮತ್ತು ಮೂರನೇ ಶ್ರೇಣಿಯ (ಟೈರ್‌–2 ಮತ್ತು ಟೈರ್‌–3) ಮಾರುಕಟ್ಟೆಗಳಲ್ಲಿ ಕೈಗೆಟುಕುವ ಬೆಲೆಯ ವಸತಿ ವಿಭಾಗವು ಪ್ರಬಲವಾಗಿದೆ. ಈ ವಿಭಾಗವು ಲಕ್ಷಾಂತರ ಭಾರತೀಯರಿಗೆ ಮಧ್ಯಮ ಬಜೆಟ್‌ನೊಂದಿಗೆ ತಮ್ಮ ಸ್ವಂತ ಮನೆಯನ್ನು ಹೊಂದಲು ಅವಕಾಶವನ್ನು ನೀಡುವುದರಿಂದ ನಾವು ಈ ವಿಭಾಗದತ್ತ ಗಮನಹರಿಸಿದ್ದೇವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT