ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಐಸಿ ಜೀವನ್ ಕಿರಣ್ ಬಿಡುಗಡೆ

Published 31 ಜುಲೈ 2023, 16:32 IST
Last Updated 31 ಜುಲೈ 2023, 16:32 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಜೀವನ್ ಕಿರಣ್ ಹೆಸರಿನ ಹೊಸ ವಿಮಾ ಪಾಲಿಸಿಯನ್ನು ರೂಪಿಸಿದೆ. ಇದು ಗ್ರಾಹಕರಿಗೆ ಈಗ ಲಭ್ಯವಿದೆ.

ಇದು ಉಳಿತಾಯ, ಜೀವ ವಿಮೆಯ ಪ್ರಯೋಜನವನ್ನು ಗ್ರಾಹಕರಿಗೆ ನೀಡುತ್ತದೆ. ದುಬಾರಿಯಲ್ಲದ ಮೊತ್ತಕ್ಕೆ ಹೆಚ್ಚಿನ ಜೀವ ವಿಮೆ ರಕ್ಷೆ ಬಯಸುವವರಿಗೆ ಇದು ಸೂಕ್ತ ಎಂದು ಕಂಪನಿ ಹೇಳಿದೆ.

10 ವರ್ಷಗಳಿಂದ 40 ವರ್ಷಗಳವರೆಗೆ ಈ ಪಾಲಿಸಿಯ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಧೂಮಪಾನ ಮಾಡುವವರಿಗೆ ಹಾಗೂ ಧೂಮಪಾನ ಮಾಡದೆ ಇರುವವರಿಗೆ ಪ್ರೀಮಿಯಂ ಮೊತ್ತದಲ್ಲಿ ವ್ಯತ್ಯಾಸ ಇರುತ್ತದೆ.

ಪಾಲಿಸಿಯನ್ನು ಎಲ್‌ಐಸಿ ವೆಬ್‌ಸೈಟ್‌ ಮೂಲಕವೂ ಖರೀದಿ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT