ನವದೆಹಲಿ: ‘ಮುಂದಿನ ಆರ್ಥಿಕ ವರ್ಷದಲ್ಲಿ ಹೊಸದಾಗಿ ಷೇರುಗಳನ್ನು ಬಿಡುಗಡೆ (ಎಫ್ಪಿಒ) ಮಾಡುವ ಮೂಲಕ ಭಾರತೀಯ ಜೀವ ವಿಮಾ ನಿಗಮದಲ್ಲಿನ (ಎಲ್ಐಸಿ) ಶೇ 6.5ರಷ್ಟು ಷೇರನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ’ ಎಂದು ಕೇಂದ್ರ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ಎಂ.ನಾಗರಾಜು ಹೇಳಿದ್ದಾರೆ.

ಪ್ರಸ್ತುತ ಕೇಂದ್ರ ಸರ್ಕಾರವು ಎಲ್ಐಸಿಯಲ್ಲಿ ಶೇ 96.5ರಷ್ಟು ಷೇರನ್ನು ಹೊಂದಿದೆ. 2022ರ ಮೇ ತಿಂಗಳಿನಲ್ಲಿ ಸಾರ್ವಜನಿಕರಿಗೆ ಷೇರು ಮಾರಾಟ ಪ್ರಕ್ರಿಯೆ (ಐಪಿಒ) ಮೂಲಕ ಶೇ 3.5ರಷ್ಟು ಷೇರುಗಳನ್ನು ಮಾರಾಟ ಮಾಡಲಾಗಿತ್ತು. ಪ್ರತಿ ಷೇರಿಗೆ ₹902ರಿಂದ ₹949 ಬೆಲೆ ನಿಗದಿಪಡಿಸಲಾಗಿತ್ತು. ಈ ಷೇರು ಮಾರಾಟದಿಂದ ಸರ್ಕಾರ ₹21 ಸಾವಿರ ಕೋಟಿ ಸಂಗ್ರಹಿಸಿತ್ತು.

ಕೇಂದ್ರ ಸರ್ಕಾರವು ಎಲ್ಐಸಿಯಲ್ಲಿ ತನ್ನ ಷೇರಿನ ಪಾಲನ್ನು ತಗ್ಗಿಸಲು ಆಲೋಚನೆ ನಡೆಸಿದೆ. ಎಲ್ಐಸಿಯ ಎಫ್ಪಿಒ ಪ್ರಕ್ರಿಯೆ ನಿಧಾನವಾಗಿ ಮಾಡಬೇಕಿದೆ. ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಗೆ (ಡಿಐಪಿಎಎಂ) ಎಲ್ಐಸಿಯಲ್ಲಿನ ಷೇರನ್ನು ಕಡಿಮೆ ಮಾಡುವಂತೆ ಸೂಚಿಸಲಾಗಿದೆ.

ಎಲ್ಲ ಅನುಮೋದನೆ ದೊರೆತರೆ ಮತ್ತು ಮಾರುಕಟ್ಟೆ ಪರಿಸ್ಥಿತಿ ಅನುಕೂಲಕರವಾಗಿದ್ದರೆ ಎಲ್ಐಸಿಯ ಎಫ್ಪಿಒ ಮುಂದಿನ ಆರ್ಥಿಕ ವರ್ಷದಲ್ಲಿ ಬರುವ ನಿರೀಕ್ಷೆ ಇದೆ.

2027ರ ಮೇ ವೇಳೆಗೆ ಎಲ್ಐಸಿಯಲ್ಲಿ ಸಾರ್ವಜನಿಕರ ಷೇರುಪಾಲು ಶೇ 10ರಷ್ಟು ಇರಬೇಕಾಗಿದೆ. ಹೀಗಾಗಿ ಸರ್ಕಾರವು ಆ ಸಮಯಕ್ಕೆ ಮೊದಲು ಶೇ 6.5ರಷ್ಟು ಷೇರುಗಳನ್ನು ಮಾರಾಟ ಮಾಡಬೇಕಿದೆ. ಷೇರುಗಳ ಮಾರಾಟದ ಪ್ರಮಾಣ, ಬೆಲೆ ಮತ್ತು ಸಮಯವನ್ನು ಸರಿಯಾದ ಸಮಯದಲ್ಲಿ ನಿರ್ಧರಿಸಲಾಗುತ್ತದೆ ಎಂದು ನಾಗರಾಜು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.