ನವದೆಹಲಿ: ರಫ್ತು ವ್ಯವಹಾರದಲ್ಲಿ ತೊಡಗಿರುವವರಿಗೆ ಸಾಲದ ಖಾತರಿ ಯೋಜನೆಯ (ಸಿಜಿಎಸ್ಇ) ಅಡಿಯಲ್ಲಿ ಒಂದೇ ತಿಂಗಳಿನಲ್ಲಿ ₹3,361.83 ಕೋಟಿ ಮೊತ್ತವನ್ನು ಹಣಕಾಸು ಸಂಸ್ಥೆಗಳು ಮಂಜೂರು ಮಾಡಿವೆ.

ಅಮೆರಿಕವು ಹೇರಿರುವ ಭಾರಿ ಸುಂಕದ ಪರಿಣಾಮವಾಗಿ ಸವಾಲು ಎದುರಿಸುತ್ತಿರುವ ರಫ್ತುದಾರರಿಗೆ ಇದು ನೆರವು ನೀಡಲಿದೆ ಎಂದು ಹಣಕಾಸು ಸೇವೆಗಳ ಇಲಾಖೆ (ಡಿಎಫ್ಎಸ್) ತಿಳಿಸಿದೆ.

ಕಳೆದ ನವೆಂಬರ್ 12ರಂದು ನಡೆದ ಕೇಂದ್ರ ಸಚಿವ ಸಂಪುಟವು, ಎಂಎಸ್ಎಂಇ ಸೇರಿದಂತೆ ಅರ್ಹ ರಫ್ತುದಾರರಿಗೆ ₹20 ಸಾವಿರ ಕೋಟಿವರೆಗೆ ಹೆಚ್ಚುವರಿಯಾಗಿ ಸಾಲವನ್ನು ನೀಡುವ ಯೋಜನೆಗೆ ಅನುಮೋದನೆ ನೀಡಿದೆ.

ಈ ಯೋಜನೆ ಡಿಸೆಂಬರ್ 1ರಿಂದ ಕಾರ್ಯರೂಪಕ್ಕೆ ಬಂದಿದೆ. ಇದು ದೇಶದ ರಫ್ತುದಾರರಿಗೆ ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳು ಹೆಚ್ಚುವರಿ ಹಣಕಾಸಿನ ನೆರವನ್ನು ಒದಗಿಸಲು ಅವಕಾಶ ಮಾಡಿಕೊಡುತ್ತದೆ. ಅಲ್ಲದೆ ರಫ್ತುದಾರರಿಗೆ ಹೊಸ ಮಾರುಕಟ್ಟೆಗಳನ್ನು ಕಂಡುಕೊಳ್ಳಲು ಮತ್ತು ಜಾಗತಿಕ ಮಟ್ಟದಲ್ಲಿ ತಮ್ಮ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದೆ.

ಜನವರಿ 2ರವರೆಗೆ ಈ ಯೋಜನೆಯ ಅಡಿ ₹8,764 ಕೋಟಿ ಮೊತ್ತದ ಸಾಲ ಕೋರಿ 1,840 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈ ಪೈಕಿ 774 ಅರ್ಜಿಗಳಿಗೆ ₹3,361 ಕೋಟಿ ಮೊತ್ತದ ಸಾಲವನ್ನು ಮಂಜೂರು ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಅಧೀನದಲ್ಲಿನ ಹಣಕಾಸು ಸೇವೆಗಳ ಇಲಾಖೆ ತಿಳಿಸಿದೆ.

ಈ ಯೋಜನೆಯು 2026ರ ಮಾರ್ಚ್ 31ರವರೆಗೆ ಅಥವಾ ₹20 ಸಾವಿರ ಕೋಟಿ ಸಾಲದ ಖಾತರಿ ನೀಡುವವರೆಗೆ ಇರಲಿದೆ.

‘ಎಂಎಸ್ಎಂಇಗಳಿಗೆ ಸಾಲದ ಖಾತರಿ ಯೋಜನೆ’ಯ ಅಡಿ ಯಂತ್ರೋಪಕರಣ ಖರೀದಿಸುವ ಎಂಎಸ್ಎಂಇ ವಲಯದ ಉದ್ಯಮಿಗಳಿಗೆ ₹100 ಕೋಟಿವರೆಗೆ ಹೆಚ್ಚುವರಿ ಸಾಲಕ್ಕೆ ಖಾತರಿ ನೀಡಲಾಗುತ್ತದೆ. ಈ ಮೂಲಕ ತಯಾರಿಕೆಗೆ ಉತ್ತೇಜನ ನೀಡುವ ಗುರಿಯನ್ನು ಹೊಂದಿದೆ.

Highlights - null

Cut-off box - ಬ್ಯಾಂಕ್ಗಳಿಗೆ ₹4 ಲಕ್ಷ ಕೋಟಿ ಲಾಭ ಇಲಾಖೆಯು ಬ್ಯಾಂಕುಗಳ ಹಣಕಾಸಿನ ಸ್ಥಿಯ ಬಗ್ಗೆಯೂ ಮಾಹಿತಿ ಒದಗಿಸಿದ್ದು 2024-25ರ ಆರ್ಥಿಕ ವರ್ಷದಲ್ಲಿ ವಾಣಿಜ್ಯ ಬ್ಯಾಂಕ್ಗಳು (ಎಸ್ಸಿಬಿ) ದಾಖಲೆಯ ₹4.01 ಲಕ್ಷ ಕೋಟಿ ನಿವ್ವಳ ಲಾಭ ಗಳಿಸಿವೆ ಎಂದು ಹೇಳಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು ಕಳೆದ ಆರ್ಥಿಕ ವರ್ಷದಲ್ಲಿ ₹1.78 ಲಕ್ಷ ಕೋಟಿ ಲಾಭ ಗಳಿಸಿವೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ (ಏಪ್ರಿಲ್ನಿಂದ ಸೆಪ್ಟೆಂಬರ್ವರೆಗೆ) ₹0.94 ಲಕ್ಷ ಕೋಟಿ ಲಾಭ ಗಳಿಸಿವೆ. 2015ರ ಮಾರ್ಚ್ನಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು ಗ್ರಾಹಕರಿಂದ ಸಂಗ್ರಹಿಸಿದ ಠೇವಣಿ ಮತ್ತು ಗ್ರಾಹಕರಿಗೆ ನೀಡಿದ ಸಾಲವು ಕ್ರಮವಾಗಿ ₹71.95 ಲಕ್ಷ ಕೋಟಿ ಮತ್ತು ₹56.16 ಲಕ್ಷ ಕೋಟಿ ಆಗಿತ್ತು. ಇದು 2025ರ ಸೆಪ್ಟೆಂಬರ್ ವೇಳೆಗೆ ಕ್ರಮವಾಗಿ ₹146.27 ಲಕ್ಷ ಕೋಟಿ ಮತ್ತು ₹114.85 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಒಟ್ಟು ವಸೂಲಾಗದ ಸಾಲದ ಪ್ರಮಾಣ (ಜಿಎನ್ಪಿಎ) ಶೇ 4.97ರಿಂದ ಶೇ 2.30ಕ್ಕೆ ಇಳಿದಿದೆ. ಇದು 2018ರ ಮಾರ್ಚ್ನಲ್ಲಿ ಶೇ 14.58ರಷ್ಟು ಇತ್ತು. ಇದು ದಾಖಲೆಯ ಮಟ್ಟದ್ದ ಎನ್ಪಿಎ ಆಗಿತ್ತು. ಬ್ಯಾಂಕ್ಗಳ ಬಂಡವಾಳ ಮೀಸಲು ಅನುಪಾತ (ಸಿಎಆರ್) ಶೇ 11.45ರಿಂದ ಶೇ 15.96ಕ್ಕೆ ಏರಿಕೆ ಆಗಿದ್ದು ಶೇ 4.51ರಷ್ಟು (451 ಮೂಲಾಂಶ) ಸುಧಾರಿಸಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.