ಬೆಂಗಳೂರು: ಗ್ರಾನೈಟ್ ಮತ್ತು ಕಲ್ಲು ಉದ್ಯಮದ ಬೆಳವಣಿಗೆಗೆ ಕ್ವಾರಿಗಳನ್ನು 30ರಿಂದ 50 ವರ್ಷಗಳ ಅವಧಿಗೆ ಗುತ್ತಿಗೆ ನೀಡಬೇಕು ಎಂದು ಭಾರತೀಯ ಗ್ರಾನೈಟ್ ಮತ್ತು ಕಲ್ಲು ಉದ್ಯಮದ ಒಕ್ಕೂಟವು (ಎಫ್‌ಐಜಿಎಸ್‌ಐ) ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

‘ಉದ್ಯಮದ ಸವಾಲುಗಳು ಮತ್ತು ಅವಕಾಶಗಳು’ ವಿಷಯವಾಗಿ ಬುಧವಾರ ನಡೆದ ಸಮಾವೇಶದಲ್ಲಿ, ಉದ್ಯಮವನ್ನು ಬೆಳವಣಿಗೆಯ ಹಾದಿಗೆ ತರಲು ಅಗತ್ಯವಿರುವ ಕ್ರಮಗಳ ಕುರಿತು ಸರ್ಕಾರದ ಗಮನ ಸೆಳೆಯಲು ಒಕ್ಕೂಟವು ಯತ್ನಿಸಿತು. ಗ್ರಾನೈಟ್ ಬ್ಲಾಕ್‌ಗಳ ಆಮದನ್ನು ಓಪನ್ ಜನರಲ್ ಲೈಸೆಲ್ಸ್ (ಒಜಿಎಲ್) ಅಡಿ ತರುವುದು, ಬ್ಲಾಕ್‌ಗಳ ಮೇಲೆ, ಸ್ಲ್ಯಾಬ್‌ಗಳು ಮತ್ತು ಟೈಲ್ಸ್‌ಗಳ ಮೇಲೆ ಜಿಎಸ್‌ಟಿ ಪ್ರಮಾಣವನ್ನು ಕಡಿಮೆ ಮಾಡಲು ಒಕ್ಕೂಟವು ಒತ್ತಾಯ ಮಾಡಿದೆ.

ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಸ್. ಕೃಷ್ಣ ಪ್ರಸಾದ್, ‘ಕಚ್ಚಾ ಸಾಮಗ್ರಿಗಳ ಕೊರತೆಯ ಸಮಸ್ಯೆಯನ್ನು ನೀಗಿಸಲು ‘ಒಜಿಎಲ್’ ಅಡಿಯಲ್ಲಿ ಗ್ರಾನೈಟ್ ಅನ್ನು ಉಚಿತವಾಗಿ ಆಮದು ಮಾಡಿಕೊಳ್ಳಲು ಅವಕಾಶ ನೀಡುವುದು ಇಂದಿನ ತುರ್ತು ಅಗತ್ಯಗಳಲ್ಲಿ ಒಂದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.