ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಗಿತು ದೇಶದ ಸಿರಿವಂತರ ಸಂಪತ್ತು: ಮಿತ್ತಲ್‌, ದಿಲೀಪ್‌ ಸಾಂಘ್ವಿಗೂ ನಷ್ಟ

ಬ್ಲೂಮ್‌ಬರ್ಗ್‌ನ 2018ರ ಕುಬೇರರ ಪಟ್ಟಿ
Last Updated 23 ಡಿಸೆಂಬರ್ 2018, 17:03 IST
ಅಕ್ಷರ ಗಾತ್ರ

ನವದೆಹಲಿ: ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ವಾಣಿಜ್ಯ ಸಂಘರ್ಷದಿಂದಾಗಿ 2018ರಲ್ಲಿ ಭಾರತದ ಸಿರಿವಂತರ ಸಂಪತ್ತು ಕರಗುವಂತಾಗಿದೆ.

ದೇಶದ 23 ಸಿರಿವಂತರ ಸಂಪತ್ತಿನಲ್ಲಿ ₹ 1.49 ಲಕ್ಷ ಕೋಟಿ ಕರಗಿದೆ ಎಂದು ಬ್ಲೂಮ್‌ಬರ್ಗ್‌ ಸಂಸ್ಥೆ ವರದಿ ಮಾಡಿದೆ.

ವಿಶ್ವದ ಉಕ್ಕು ಉದ್ಯಮದ ಮೇಲೆ ನಿಯಂತ್ರಣ ಹೊಂದಿರುವ ಆರ್ಸೆಲರ್ ಮಿತ್ತಲ್‌ ಕಂಪನಿಯ ಅಧ್ಯಕ್ಷ ಲಕ್ಷ್ಮಿ ಮಿತ್ತಲ್‌ ಅವರು ತಮ್ಮ ಸಂಪತ್ತಿನಲ್ಲಿ ಅತಿ ಹೆಚ್ಚು ಅಂದರೆ ₹ 39,200 ಕೋಟಿಯಷ್ಟು ನಷ್ಟ ಅನುಭವಿಸಿದ್ದಾರೆ.

ಸನ್‌ಫಾರ್ಮಾ ಕಂಪನಿಯ ಸ್ಥಾಪಕ ದಿಲೀಪ್‌ ಸಾಂಘ್ವಿ ಅವರ ಸಂಪತ್ತಿನಲ್ಲಿ ₹ 32,200 ಕೋಟಿ ಕರಗಿದೆ.

ಆದರೆ, ರಿಲಯನ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್‌ನ (ಆರ್‌ಐಎಲ್‌) ಅಧ್ಯಕ್ಷ ಮುಕೇಶ್‌ ಅಂಬಾನಿ ಅವರ ಸಂಪತ್ತು ₹ 28 ಸಾವಿರ ಕೋಟಿಯಷ್ಟು ವೃದ್ಧಿಯಾಗಿದೆ.

ಏಷ್ಯಾದಲ್ಲಿನ 128 ಸಿರಿವಂತರ ಸಂಪತ್ತಿನಲ್ಲಿ ₹ 9.59 ಲಕ್ಷ ಕೋಟಿ ಕೊಚ್ಚಿ ಹೋಗಿದೆ. 2012ರ ಬಳಿಕ ಇದೇ ಮೊದಲ ಬಾರಿಗೆ ಈ ವಲಯದ ಸಿರಿವಂತರ ಸಂಪತ್ತಿನಲ್ಲಿ ಇಳಿಕೆ ಕಂಡುಬಂದಿದೆ.

ಶಿಯೋಮಿ ಕಾರ್ಪೊರೇಷನ್‌ನ ಅಧ್ಯಕ್ಷ ಲೀ ಜುನ್‌, ಅಲಿಬಾಬಾ ಹೋಲ್ಡಿಂಗ್ಸ್‌ ಲಿಮಿಟೆಡ್‌ನ ಜಾಕ್‌ ಮಾ ಅವರ ಸಂಪತ್ತು ವೃದ್ಧಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT