ಶನಿವಾರ, ಜನವರಿ 25, 2020
28 °C

ಸಬ್ಸಿಡಿರಹಿತ ಎಲ್‌ಪಿಜಿ ಬೆಲೆ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸಬ್ಸಿಡಿರಹಿತ ಅಡುಗೆ ಅನಿಲದ (ಎಲ್‌ಪಿಜಿ) ಬೆಲೆಯನ್ನು ದೇಶದಾದ್ಯಂತ 14.2 ಕೆಜಿಯ ಪ್ರತಿ ಸಿಲಿಂಡರ್‌ಗೆ ಸರಾಸರಿ ₹ 15ರಂತೆ ಹೆಚ್ಚಿಸಲಾಗಿದೆ.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಸತತ ನಾಲ್ಕನೇ ತಿಂಗಳೂ ದರ ಹೆಚ್ಚಿಸಿವೆ. ಈ ತಿಂಗಳ ಆರಂಭದಿಂದಲೇ ಈ ಬೆಲೆ ಏರಿಕೆ ಜಾರಿಗೆ ಬಂದಿದೆ. ದರ ಹೆಚ್ಚಳವು ನಗರದಿಂದ ನಗರಕ್ಕೆ ವ್ಯತ್ಯಾಸಗೊಳ್ಳುತ್ತದೆ. ಬೆಂಗಳೂರಿನಲ್ಲಿ ₹ 680ರಷ್ಟಿದ್ದ ಬೆಲೆ ಈಗ ₹ 697.50ಕ್ಕೆ (₹ 17.50 ಹೆಚ್ಚಳ) ತಲುಪಿದೆ. ದೆಹಲಿ (₹ 13.50) ಮತ್ತು ಚೆನ್ನೈನಲ್ಲಿ ₹ 18ರಂತೆ ಏರಿಕೆಯಾಗಿದೆ.

ಒಂದು ವರ್ಷದಲ್ಲಿ ಪ್ರತಿ ಕುಟುಂಬಕ್ಕೆ 12 ಎಲ್‌ಪಿಜಿ ಸಿಲಿಂಡರ್‌ಗಳನ್ನು ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತಿದೆ. ಇವುಗಳ ಖರೀದಿ ಸಂದರ್ಭದಲ್ಲಿ ಪೂರ್ಣ ಬೆಲೆ ಪಾವತಿಸಬೇಕಾಗುತ್ತದೆ. ಸಬ್ಸಿಡಿ ಮೊತ್ತವನ್ನು ಆನಂತರ ಗ್ರಾಹಕರ ಬ್ಯಾಂಕ್‌ ಖಾತೆಗೆ ವರ್ಗಾಯಿಸಲಾಗುತ್ತಿದೆ.

ಪ್ರತಿಕ್ರಿಯಿಸಿ (+)