ಭಾನುವಾರ, ಜನವರಿ 24, 2021
23 °C

ಎಲ್‌ಪಿಜಿ ದರ ₹ 50 ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅಡುಗೆ ಅನಿಲ (ಎಲ್‌ಪಿಜಿ) ದರವನ್ನು ಪ್ರತಿ ಸಿಲಿಂಡರ್‌ಗೆ ₹ 50ರಷ್ಟು ಹೆಚ್ಚಿಸಲಾಗಿದೆ. ಈ ತಿಂಗಳಿನಲ್ಲಿ ಎರಡನೇ ಬಾರಿ ಆಗಿರುವ ದರ ಏರಿಕೆ ಇದು.

ಇದರಿಂದ 14.2ಕೆ.ಜಿ ಸಿಲಿಂಡರ್‌ನ ದರ ₹ 644 ಇದ್ದಿದ್ದು ₹ 694ಕ್ಕೆ ಏರಿಕೆಯಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಇಂಧನ ಮಾರಾಟ ಕಂಪನಿಗಳು ಪ್ರಕಟಣೆಯಲ್ಲಿ ತಿಳಿಸಿವೆ.

ಡಿಸೆಂಬರ್‌ 1ರಂದು ಪ್ರತಿ ಸಿಲಿಂಡರ್ ದರ ₹ 50ರಷ್ಟು ಹೆಚ್ಚಿಳ ಆಗಿತ್ತು. 5 ಕೆ.ಜಿ.ಯ ಪ‍್ರತಿ ಸಿಲಿಂಡರ್‌ ದರ ₹18 ಹಾಗೂ 19 ಕೆ.ಜಿ ಸಿಲಿಂಡರ್‌ ದರ ₹ 36.50ರಷ್ಟು ಹೆಚ್ಚಾಗಿದೆ.

ವಿಮಾನ ಇಂಧನ (ಜೆಟ್ ಇಂಧನ) ದರ ಶೇ 6.3ರಷ್ಟು ಹೆಚ್ಚಿಸಲಾಗಿದ್ದು, ದೆಹಲಿಯಲ್ಲಿ ಪ್ರತಿ ಕಿಲೊ ಲೀಟರಿಗೆ ₹ 49,161ಕ್ಕೆ ಏರಿಕೆಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು