ಬುಧವಾರ, ಸೆಪ್ಟೆಂಬರ್ 18, 2019
28 °C

ಐಷಾರಾಮಿ ಫ್ಲ್ಯಾಟ್‌ಗೆ ಬೇಡಿಕೆ

Published:
Updated:

‌ನವದೆಹಲಿ: ದೇಶದ ಪ್ರಮುಖ 7 ನಗರಗಳಲ್ಲಿ ನೋಟು ರದ್ದತಿ ಬಳಿಕ ಬೇಡಿಕೆ ಕಳೆದುಕೊಂಡಿದ್ದ ಐಷಾರಾಮಿ ಫ್ಲ್ಯಾಟ್‌ಗಳಿಗೆ ಇದೀಗ ಮತ್ತೆ ಬೇಡಿಕೆ ಬಂದಿದೆ ಎಂದು ಆಸ್ತಿ ಸಲಹಾ ಸಂಸ್ಥೆ ಆನಾರ್ಕ್‌ ಮಾಹಿತಿ ನೀಡಿದೆ.

ಸಿರಿವಂತರು ಮತ್ತು ಅನಿವಾಸಿ ಭಾರತೀಯರಿಂದ ಬೇಡಿಕೆ ಹೆಚ್ಚಾಗಿದೆ. ಬೆಂಗಳೂರು, ದೆಹಲಿ–ರಾಜಧಾನಿ ಪ್ರದೇಶ, ಮುಂಬೈ, ಚೆನ್ನೈ, ಕೋಲ್ಕತ್ತ, ಹೈದರಾಬಾದ್‌ ಮತ್ತು ಪುಣೆ ನಗರಗಳಲ್ಲಿ 2019ರ ಮೊದಲಾರ್ಧದಲ್ಲಿ ₹ 1.5 ಕೋಟಿಗೂ ಅಧಿಕ ಮೌಲ್ಯದ 16 ಸಾವಿರ ವಸತಿಗಳು ಮಾರಾಟವಾಗಿವೆ ಎಂದು ತಿಳಿಸಿದೆ.

2018ರ ಮೊದಲಾರ್ಧದಲ್ಲಿ 7,350 ಫ್ಲ್ಯಾಟ್‌ಗಳು ಮಾರಾಟವಾಗಿದ್ದವು ಎಂದು ಹೇಳಿದೆ.

Post Comments (+)