ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹೀಂದ್ರ ಲಾಭದಲ್ಲಿ ಶೇ 94ರಷ್ಟು ಇಳಿಕೆ

Last Updated 7 ಆಗಸ್ಟ್ 2020, 21:06 IST
ಅಕ್ಷರ ಗಾತ್ರ

ನವದೆಹಲಿ: ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯು ಮೊದಲ ತ್ರೈಮಾಸಿಕದ ಲಾಭದಲ್ಲಿ ಶೇಕಡ 94ರಷ್ಟು ಕುಸಿತ ದಾಖಲಿಸಿದೆ. ಹಿಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ₹ 894.11 ಕೋಟಿ ಲಾಭ ಕಂಡಿದ್ದ ಕಂಪನಿಯು, ಈ ತ್ರೈಮಾಸಿಕದಲ್ಲಿ ₹ 54.64 ಕೋಟಿ ಲಾಭ ಕಂಡಿದೆ.

ಈ ತ್ರೈಮಾಸಿಕದಲ್ಲಿ ಕಂಪನಿಯು ₹16,321 ಕೋಟಿ ಆದಾಯ ಕಂಡಿದೆ. ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಪನಿಯ ಆದಾಯ ₹ 26,041 ಕೋಟಿ ಆಗಿತ್ತು. ಲಾಕ್‌ಡೌನ್‌ ಕಾರಣದಿಂದಾಗಿ ಕಂಪನಿಯ ಹಣಕಾಸಿನ ಫಲಿತಾಂಶದ ಮೇಲೆ ನಕಾರಾತ್ಮಕ‍ಪರಿಣಾಮ ಉಂಟಾಗಿದೆ.

‘ಕೃಷಿ ಚಟುವಟಿಕೆಗಳಿಗೆ ಲಾಕ್‌ಡೌನ್‌ನಿಂದ ಸಕಾಲದಲ್ಲಿ ವಿನಾಯಿತಿ ನೀಡಿದ ಪರಿಣಾಮವಾಗಿ, ಟ್ರ್ಯಾಕ್ಟರ್‌ಗಳ ಮಾರಾಟದಲ್ಲಿ ಒಳ್ಳೆಯ ಮಾರಾಟ ಕಂಡುಬಂದಿದೆ’ ಎಂದು ಕಂಪನಿ ಹೇಳಿದೆ. ಮೊದಲ ತ್ರೈಮಾಸಿಕದಲ್ಲಿ ಭಾರತದ ಆಟೊಮೊಬೈಲ್‌ ಕ್ಷೇತ್ರವು (ದ್ವಿಚಕ್ರ ವಾಹನ ಮಾರಾಟ ಹೊರತುಪಡಿಸಿ) ಹಿಂದಿನ ವರ್ಷದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇಕಡ 81.5ರಷ್ಟು ಇಳಿಕೆ ದಾಖಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT