ಶುಕ್ರವಾರ, ಜುಲೈ 23, 2021
23 °C

ಬಿಎಸ್‌6ನ ಆಂಬುಲೆನ್ಸ್‌ ಮಹೀಂದ್ರಾ ಸುಪ್ರೊ ಬಿಡುಗಡೆ

ಪಿಟಿಐ Updated:

ಅಕ್ಷರ ಗಾತ್ರ : | |

Mahindra

ಮುಂಬೈ: ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಕಂಪನಿಯು ಕೋವಿಡ್‌ ಬಿಕ್ಕಟ್ಟಿನ ಸಂದರ್ಭ  ಗಮನದಲ್ಲಿ ಇಟ್ಟುಕೊಂಡು ಬಿಎಸ್‌6 ಮಾನದಂಡಕ್ಕೆ ಪೂರಕವಾದ ಆಂಬುಲೆನ್ಸ್‌ ‘ಸುಪ್ರೊ’ ಬಿಡುಗಡೆ ಮಾಡಿದೆ. ಬೆಲೆ ₹ 6.94 ಲಕ್ಷ ಇದೆ.

ಎಲ್‌ಎಕ್ಸ್‌ ಮತ್ತು ಜೆಡ್‌ಎಕ್ಸ್‌ ಎಂಬ ಎರಡು ಅವತರಣಿಕೆಗಳಲ್ಲಿ ಲಭ್ಯವಿದ್ದು, ಮೊದಲ ಹಂತದಲ್ಲಿ 12 ಆಂಬುಲೆನ್ಸ್‌ಗಳನ್ನು ವಿಶೇಷವಾಗಿ ಮಹಾರಾಷ್ಟ್ರ ಸರ್ಕಾರಕ್ಕಾಗಿ ತಯಾರಿಸಲಾಗಿದೆ. ಕೋವಿಡ್‌–19 ವಿರುದ್ಧದ ಹೋರಾಟಕ್ಕೆ ಇದು ಬಳಕೆಯಾಗಲಿದೆ ಎಂದು ತಿಳಿಸಿದೆ.

ಸರ್ಕಾರಿ ಸಂಘಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು, ಕಂಪನಿಗಳು ಈ ಆಂಬುಲೆನ್ಸ್‌ ಖರೀದಿಗೆ ಆಸಕ್ತಿ ತೋರಿಸಿವೆ. ಹೀಗಾಗಿ ಬೇಡಿಕೆಗೆ ಅನುಗುಣವಾಗಿ ತಯಾರಿಕೆ  ಹೆಚ್ಚಿಸಲಾಗುವುದು ಎಂದು ಹೇಳಿದೆ.

 ಸ್ಟ್ರೆಚರ್‌ ಕಮ್‌ ಟ್ರಾಲಿ, ಮೆಡಿಕಲ್‌ ಕಿಟ್ ಬಾಕ್ಸ್‌, ಆಕ್ಸಿಜನ್‌ ಸಿಲಿಂಡರ್ ಇಡಲು ಸ್ಥಳಾವಕಾಶ, ಬೆಂಕಿ ನಂದಿಸುವ ಸಾಧನ ಹೀಗೆ ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನೂ ಹೊಂದಿದೆ. ಎರಡು ವರ್ಷಗಳ ಅಥವಾ 60 ಸಾವಿರ ಕಿ.ಮೀವರೆಗಿನ ವಾರಂಟಿ ಇದೆ ಎಂದು ತಿಳಿಸಿದೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು