ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಕ್ಟೋಬರ್‌ನಲ್ಲಿ 20 ಹೊಸ ಮಳಿಗೆ: ಮಲಬಾರ್‌

Published : 5 ಸೆಪ್ಟೆಂಬರ್ 2024, 14:47 IST
Last Updated : 5 ಸೆಪ್ಟೆಂಬರ್ 2024, 14:47 IST
ಫಾಲೋ ಮಾಡಿ
Comments

ನವದೆಹಲಿ: ಜಾಗತಿಕ ವಿಸ್ತರಣೆಯ ಭಾಗವಾಗಿ ಅಕ್ಟೋಬರ್‌ನಲ್ಲಿ 20 ಹೊಸ ಮಳಿಗೆಗಳನ್ನು ಆರಂಭಿಸುವುದಾಗಿ ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ ಗುರುವಾರ ತಿಳಿಸಿದೆ.

ಉತ್ತರಪ್ರದೇಶದಲ್ಲಿ 3, ನವದೆಹಲಿ, ಮಹಾರಾಷ್ಟ್ರ, ಕರ್ನಾಟಕ ಮತ್ತು ರಾಜಸ್ಥಾನದಲ್ಲಿ ತಲಾ 2, ಒಡಿಶಾ, ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ಪಂಜಾಬ್‌ನಲ್ಲಿ ತಲಾ ಒಂದು ಮಳಿಗೆ ಆರಂಭಿಸಲಾಗುವುದು. ಶಾರ್ಜಾ, ಕತಾರ್‌, ಸೌದಿ ಅರೇಬಿಯಾ ಮತ್ತು ಉತ್ತರ ಅಮೆರಿಕದಲ್ಲಿಯೂ ಮಳಿಗೆ ಆರಂಭಿಸುವುದಾಗಿ ತಿಳಿಸಿದೆ. ಪ್ರಸ್ತುತ ಮಲಬಾರ್‌ ಗೋಲ್ಡ್‌ 13 ದೇಶಗಳಲ್ಲಿ 335 ಮಳಿಗೆಗಳನ್ನು ಹೊಂದಿದೆ.

‘ಈ ವಿಸ್ತರಣೆಯು ನಮ್ಮ ವ್ಯವಹಾರವನ್ನು ಮತ್ತಷ್ಟು ಹೆಚ್ಚಿಸಲಿದೆ. ಹೊಸ ಮಳಿಗೆಗಳು ವೈವಿಧ್ಯಮಯವಾದ ಸಾಂಪ್ರದಾಯಿಕ ಮತ್ತು ಸಮಕಾಲೀನ ಆಭರಣ ಸಂಗ್ರಹವನ್ನು ಹೊಂದಿರಲಿವೆ’ ಎಂದು ಮಲಬಾರ್‌ ಸಮೂಹದ ಅಧ್ಯಕ್ಷ ಎಂ.ಪಿ. ಅಹ್ಮದ್‌ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT