ನವದೆಹಲಿ: ದೇಶದ ತಯಾರಿಕಾ ವಲಯವು 2021–22ರಲ್ಲಿ ಒಟ್ಟು 21.34 ಬಿಲಿಯನ್ ಅಮೆರಿಕನ್ ಡಾಲರ್ (ಅಂದಾಜು ₹ 1.70 ಲಕ್ಷ ಕೋಟಿ) ವಿದೇಶಿ ನೇರ ಬಂಡವಾಳವನ್ನು ಆಕರ್ಷಿಸಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯವು ಗುರುವಾರ ಹೇಳಿದೆ. ಈ ಮೊತ್ತವು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡ 76ರಷ್ಟು ಹೆಚ್ಚು.

ಎಫ್‌ಡಿಐ ನೀತಿಯ ವಿಚಾರದಲ್ಲಿ ಹಲವು ಸುಧಾರಣೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ವಿಮೆ, ರಕ್ಷಣೆ, ದೂರಸಂಪರ್ಕ, ಹಣಕಾಸು ಸೇವೆಗಳು, ಔಷಧ, ರಿಟೇಲ್ ವಹಿವಾಟು ಮತ್ತು ಇ–ವಾಣಿಜ್ಯ ವಲಯಗಳಲ್ಲಿ ಈ ಸುಧಾರಣೆಗಳು ಜಾರಿಗೆ ಬಂದಿವೆ ಎಂದು ಸಚಿವಾಲಯ ಹೇಳಿದೆ.

2020–21ರಲ್ಲಿ ತಯಾರಿಕಾ ವಲಯದಲ್ಲಿನ ವಿದೇಶಿ ನೇರ ಬಂಡವಾಳ ಹೂಡಿಕೆಯು 12.09 ಅಮೆರಿಕನ್ ಡಾಲರ್ (ಅಂದಾಜು ₹ 96 ಸಾವಿರ ಕೋಟಿ) ಆಗಿತ್ತು ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.