ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆ ಸೂಚ್ಯಂಕ ಕುಸಿತ

Last Updated 24 ಏಪ್ರಿಲ್ 2020, 20:30 IST
ಅಕ್ಷರ ಗಾತ್ರ

ಮುಂಬೈ: ಷೇರುಪೇಟೆಯ ಎರಡು ವಹಿವಾಟು ದಿನಗಳ ಗಳಿಕೆಗೆ ಶುಕ್ರವಾರದ ವಹಿವಾಟಿನಲ್ಲಿ ತಡೆ ಬಿದ್ದಿತು.

ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌ ಮ್ಯೂಚುವಲ್‌ ಫಂಡ್‌ ತನ್ನ 6 ಸಾಲ ನಿಧಿ ಯೋಜನೆಗಳನ್ನು ಹಠಾತ್ತಾಗಿ ರದ್ದುಪಡಿಸಿದ್ದರಿಂದ ಹಣಕಾಸು ಮತ್ತು ಬ್ಯಾಂಕಿಂಗ್‌ ಷೇರುಗಳ ಬೆಲೆ ಕುಸಿತ ಕಂಡಿತು. ರೂಪಾಯಿ ಬೆಲೆ ಕುಸಿತ ಮತ್ತು ಜಾಗತಿಕ ಷೇರುಪೇಟೆಗಳಲ್ಲಿನ ಮಾರಾಟ ಒತ್ತಡದ ಫಲವಾಗಿ ಸಂವೇದಿ ಸೂಚ್ಯಂಕವು 536 ಅಂಶಗಳಷ್ಟು ಕುಸಿದು 31,327 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು.

ಬಜಾಜ್‌ ಫೈನಾನ್ಸ್‌ ಷೇರು (ಶೇ 9.14) ಗರಿಷ್ಠ ನಷ್ಟ ಕಂಡಿತು. ನಂತರದ ಸ್ಥಾನದಲ್ಲಿ ಇಂಡಸ್‌ಇಂಡ್‌ ಬ್ಯಾಂಕ್‌ (ಶೇ 6.58), ಆ್ಯಕ್ಸಿಸ್‌ ಬ್ಯಾಂಕ್‌ (ಶೇ 5.96), ಐಸಿಐಸಿಐ ಬ್ಯಾಂಕ್‌ (ಶೇ 5.09) ಮತ್ತು ಎಚ್‌ಡಿಎಫ್‌ಸಿ ಶೇ 5ರಷ್ಟು ನಷ್ಟ ಕಂಡವು.

ರೂಪಾಯಿ ಬೆಲೆ ನಷ್ಟ: ಡಾಲರ್‌ ಎದುರಿನ ರೂಪಾಯಿ ವಿನಿಮಯ ದರವು 40 ಪೈಸೆ ಕಡಿಮೆಯಾಗಿ ₹ 76.46ಕ್ಕೆ ಇಳಿದಿದೆ.

ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌ ಮ್ಯೂಚುವಲ್‌ ಫಂಡ್‌ನಲ್ಲಿನ ವಿದ್ಯಮಾನದಿಂದಾಗಿ ಬಂಡವಾಳದ ಹೊರ ಹರಿವು ಹೆಚ್ಚಳಗೊಳ್ಳುವ ಆತಂಕವು ರೂಪಾಯಿ ಬೆಲೆ ಕುಸಿತಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT