ಬುಧವಾರ, ಜನವರಿ 27, 2021
24 °C

ಲಾಭ ಗಳಿಕೆ: ಸೂಚ್ಯಂಕ 695 ಅಂಶ ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಬ್ಯಾಂಕಿಂಗ್, ಹಣಕಾಸು ಮತ್ತು ಐ.ಟಿ. ವಲಯದ ಷೇರುಗಳಲ್ಲಿ ಲಾಭ ಗಳಿಕೆಯ ವಹಿವಾಟು ನಡೆದಿದ್ದರಿಂದ ದೇಶದ ಷೇರುಪೇಟೆಗಳು ಬುಧವಾರ ದಾಖಲೆ ಮಟ್ಟದಿಂದ ಇಳಿಕೆ ಕಂಡಿವೆ.

ಮೂರು ದಿನಗಳಿಂದ ಗಳಿಕೆ ಹಾದಿಯಲ್ಲಿದ್ದ ಮುಂಬೈ ಷೇರುಪೇಟೆ ಸೂಚ್ಯಂಕ ಬುಧವಾರ 695 ಅಂಶ ಕುಸಿತ ಕಂಡಿತು. 43,828 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ವಹಿವಾಟಿನ ಆರಂಭದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 44,825ಕ್ಕೆ ತಲುಪಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಮಧ್ಯಂತರ ವಹಿವಾಟಿನಲ್ಲಿ 13,146 ಅಂಶಗಳ ಗರಿಷ್ಠ ಮಟ್ಟ ತಲುಪಿತ್ತು. ನಂತರ 197 ಅಂಶ ಇಳಿಕೆ ಕಂಡು 12,858 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಗರಿಷ್ಠ ನಷ್ಟ: ದಿನದ ವಹಿವಾಟಿನಲ್ಲಿ ಕೋಟಕ್‌ ಬ್ಯಾಂಕ್‌ ಷೇರು ಶೇ 3.22ರಷ್ಟು ಗರಿಷ್ಠ ನಷ್ಟ ಕಂಡಿತು.

ಗಳಿಕೆ: ಒಎನ್‌ಜಿಸಿ, ಪವರ್‌ ಗ್ರಿಡ್‌ ಮತ್ತು ಇಂಡಸ್‌ ಇಂಡ್‌ ಷೇರುಗಳು ಶೇ 6.25ರವರೆಗೂ ಏರಿಕೆ ಕಂಡಿವೆ.

ಬಿಎಸ್‌ಇ ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ಸೂಚ್ಯಂಕಗಳು ಶೇ 1.76ರವರೆಗೂ ಏರಿಕೆ ಕಂಡಿವೆ.

ಕೋವಿಡ್‌–19ಕ್ಕೆ ಲಸಿಕೆ ದೊರೆಯುವ ಭರವಸೆಯಿಂದಾಗಿ ಅಮೆರಿಕದ ಡೊ ಜೋನ್ಸ್‌ ಇಂಡಸ್ಟ್ರಿಯಲ್‌ ಎವರೇಜ್‌ ಮೊದಲ ಬಾರಿಗೆ 30 ಸಾವಿರದ ಗಡಿ ದಾಟಿತು.

₹ 2.24 ಲಕ್ಷ ಕೋಟಿ ನಷ್ಟ: ದಿನದ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ₹ 2.24 ಲಕ್ಷ ಕೋಟಿಗಳಷ್ಟು ಕರಗಿದೆ. ಇದರಿಂದ ಮಾರುಕಟ್ಟೆ ಬಂಡವಾಳ ಮೌಲ್ಯ ₹ 172.56 ಲಕ್ಷ ಕೋಟಿಗೆ ಇಳಿಕೆಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.