ಭಾನುವಾರ, ಜುಲೈ 25, 2021
25 °C

ಮಾರುತಿ: ಕೊರೊನಾ ರಕ್ಷಣೆ ಬಿಡಿಭಾಗ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ : ಕಾರ್‌ ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ), ಕೊರೊನಾ–2 ವೈರಾಣು ಸೋಂಕು ತಡೆಗಟ್ಟಲು ನೆರವಾಗುವ ವೈವಿಧ್ಯಮಯ ಉಪಕರಣಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಈ ಉಪಯುಕ್ತ ಸಾಧನಗಳಲ್ಲಿ ಮೂರು ಪದರಿನ ಮುಖಗವಸು, ರಕ್ಷಣಾತ್ಮಕ ಕನ್ನಡಕ, ಕೈಗವಸು ಮತ್ತು ಮುಖಕವಚ ಸೇರಿವೆ. ಕಾರ್‌ ಮತ್ತು ವೈಯಕ್ತಿಕ ಕಾಳಜಿಯ ಈ ಆರೋಗ್ಯ ಮತ್ತು ನೈರ್ಮಲ್ಯ ಉಪಕರಣಗಳ ಬೆಲೆ ₹ 10 ರಿಂದ ₹ 650ರವರೆಗೆ ಇದೆ ಎಂದು ಕಂಪನಿ ತಿಳಿಸಿದೆ.

ಕಾರ್‌ನ ಒಳಭಾಗ ಸ್ವಚ್ಛಗೊಳಿಸುವ  ಮತ್ತು ಕ್ಯಾಬಿನ್‌ ಬೇರ್ಪಡಿಸುವ  ಉತ್ಪನ್ನವನ್ನೂ ಪರಿಚಯಿಸಿದೆ. ಗ್ರಾಹಕರು ಮಾರುತಿ ಡೀಲರ್‌ಶಿಪ್‌ಗಳಿಗೆ ತೆರಳಿ ಈ ಉತ್ಪನ್ನಗಳನ್ನು ಖರೀದಿಸಬಹುದು. ಕಂಪನಿಯ ಅಂತರ್ಜಾಲ ತಾಣಕ್ಕೂ ಭೇಟಿ ನೀಡಬಹುದು.

ಗ್ರಾಹಕರ ಆತ್ಮವಿಶ್ವಾಸ ಹೆಚ್ಚಿಸಲು ಆರೋಗ್ಯ ಮತ್ತು ನೈರ್ಮಲ್ಯ ಶ್ರೇಣಿಯ ಉತ್ಪನ್ನಗಳ ಸಾಲಿಗೆ ಇನ್ನೂ ಕೆಲವನ್ನು ಸೇರ್ಪಡೆ ಮಾಡಲಿದೆ ಎಂದು ಕಂಪನಿ ತಿಳಿಸಿದೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.