ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು, ಮಂಗಳೂರಿಗೂ ಬಾಡಿಗೆ ಸೇವೆ ವಿಸ್ತರಿಸಿದ ಮಾರುತಿ ಸುಜುಕಿ

Last Updated 28 ಜೂನ್ 2021, 13:06 IST
ಅಕ್ಷರ ಗಾತ್ರ

ನವದೆಹಲಿ: ಬಾಡಿಗೆ ಆಧಾರದಲ್ಲಿ ಕಾರುಗಳನ್ನು ಹೊಂದಲು ಅವಕಾಶ ಕಲ್ಪಿಸುವ ಸೇವೆಯನ್ನು ಮಂಗಳೂರು, ಮೈಸೂರು, ಜೈಪುರ, ಇಂದೋರ್‌ ನಗರಗಳಿಗೂ ವಿಸ್ತರಿಸಿರುವುದಾಗಿ ಮಾರುತಿ ಸುಜುಕಿ ಇಂಡಿಯಾ ಕಂಪನಿ ಸೋಮವಾರ ತಿಳಿಸಿದೆ. ಇದರಿಂದಾಗಿ ಒಟ್ಟಾರೆ 19 ನಗರಗಳಲ್ಲಿ ಈ ಸೇವೆ ಲಭ್ಯವಾದಂತಾಗಿದೆ ಎಂದು ಅದು ಹೇಳಿದೆ.

ಈ ಸೇವೆಗಾಗಿ ಮಾರುತಿಯು, ಓರಿಕ್ಸ್‌ ಆಟೊ ಮ್ಯಾನುಫ್ಯಾಕ್ಚರಿಂಗ್‌ ಸರ್ವೀಸಸ್‌, ಎಲ್‌ಡಿ ಆಟೊಮೊಟಿವ್‌ ಇಂಡಿಯಾ ಮತ್ತು ಮೈಲ್ಸ್‌ ಆಟೊಮೊಟಿವ್‌ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ.

ಸ್ಪರ್ಧಾತ್ಮಕ ದರದಲ್ಲಿ ಈ ಸೇವೆ ಪಡೆಯಬಹುದಾಗಿದೆ ಎಂದು ಕಂಪನಿಯ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್‌ ಶ್ರೀವಾಸ್ತವ ತಿಳಿಸಿದ್ದಾರೆ.

ಮಾರುತಿ ಸುಜುಕಿ ಚಂದಾದಾರಿಕೆ ಯೋಜನೆಯನ್ನು 2020ರ ಜುಲೈನಲ್ಲಿ ಜಾರಿಗೆ ತಂದಿದೆ. ಇದರಲ್ಲಿ ಕಂಪನಿಯ ವ್ಯಾಗನ್‌ಆರ್‌, ಸ್ವಿಫ್ಟ್‌, ಡಿಸೈರ್‌, ವಿತಾರಾ ಬ್ರೆಜಾ, ಎರ್ಟಿಗಾ, ಇಗ್ನಿಸ್‌, ಬಲೆನೊ, ಸಿಯಾಜ್‌, ಎಸ್‌–ಕ್ರಾಸ್‌ ಮತ್ತು ಎಕ್ಸ್‌ಎಲ್‌6 ವಾಹನ ಆಯ್ಕೆ ಮಾಡಿಕೊಳ್ಳಬಹುದು. ವಿವಿಧ ಅವಧಿಗಳಿಗೆ ವಾಹನವನ್ನು ತಿಂಗಳ ಬಾಡಿಗೆ ಆಧಾರದಲ್ಲಿ ಚಲಾಯಿಸಬಹುದು. ವಾಹನ ಬಳಕೆ ಶುಲ್ಕ, ನೋಂದಣಿ ಶುಲ್ಕ, ನಿರ್ವಹಣೆ, ವಿಮೆ ಹಾಗೂ ವಾಹನ ಬಳಕೆಯ ಇತರೆ ಸಾಮಾನ್ಯ ಸೇವೆಗಳಿಗೆ ಸಂಬಂಧಿಸಿದ ಶುಲ್ಕಗಳು ಈ ತಿಂಗಳ ಬಾಡಿಗೆಯಲ್ಲಿ ಸೇರಿಕೊಂಡಿವೆ.

ಬಾಡಿಗೆ ಅವಧಿ ಮುಗಿಯುವ ವೇಳೆಗೆ ಹೊಸ ಕಾರಿಗೆ ಬದಲಾಯಿಸಲು ಅಥವಾ ಬಾಡಿಗೆಯ ಆಧಾರದಲ್ಲಿ ಪಡೆದಿದ್ದ ಕಾರನ್ನೇ ಖರೀದಿಸುವ ಆಯ್ಕೆ ಕೂಡ ಇದೆ. ಗ್ರಾಹಕರು ಯಾವುದೇ ಸಂದರ್ಭದಲ್ಲಿ ಬೇಕಿದ್ದರೂ ಬಾಡಿಗೆ ಸೇವೆಯನ್ನು ನಿಲ್ಲಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT