ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

5 ಕಂಪನಿಗಳ ಎಂ–ಕ್ಯಾಪ್‌ ₹85,582 ಕೋಟಿ ಏರಿಕೆ

Published 16 ಜೂನ್ 2024, 15:41 IST
Last Updated 16 ಜೂನ್ 2024, 15:41 IST
ಅಕ್ಷರ ಗಾತ್ರ

ನವದೆಹಲಿ: ಕಳೆದ ವಾರದ ವಹಿವಾಟಿನಲ್ಲಿ ಷೇರು ಸೂಚ್ಯಂಕಗಳು ಏರಿಕೆ ಕಂಡಿದ್ದರಿಂದ ಪ್ರಮುಖ 10 ಕಂಪನಿಗಳ ಪೈಕಿ 5 ಕಂಪನಿಗಳ ಮಾರುಕಟ್ಟೆ ಮೌಲ್ಯವು (ಎಂ–ಕ್ಯಾಪ್‌) ₹85,582 ಕೋಟಿ ಏರಿಕೆಯಾಗಿದೆ.

ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮದ ಎಂ–ಕ್ಯಾಪ್‌ಗೆ (ಎಲ್‌ಐಸಿ) ₹46,425 ಕೋಟಿ ಸೇರ್ಪಡೆಯಾಗಿದೆ. ಇದರಿಂದ ನಿಗಮದ ಮಾರುಕಟ್ಟೆ ಮೌಲ್ಯ ₹6.74 ಲಕ್ಷ ಕೋಟಿಗೆ ಮುಟ್ಟಿದೆ. 

ಎಚ್‌ಡಿಎಫ್‌ಸಿ ಬ್ಯಾಂಕ್‌ ₹18,639 ಕೋಟಿ, ರಿಲಯನ್ಸ್‌ ಇಂಡಸ್ಟ್ರೀಸ್‌ ₹10,216 ಕೋಟಿ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ₹9,192 ಕೋಟಿ ಮತ್ತು ಭಾರ್ತಿ ಏರ್‌ಟೆಲ್‌ ₹1,108 ಕೋಟಿ ಎಂ–ಕ್ಯಾಪ್‌ ಗಳಿಸಿದೆ.

ಹಿಂದುಸ್ತಾನ್‌ ಯೂನಿಲಿವರ್‌ ₹22,885 ಕೋಟಿ, ಟಿಸಿಎಸ್‌ ₹22,052 ಕೋಟಿ, ಇನ್ಫೊಸಿಸ್‌ ₹18,600 ಕೋಟಿ, ಐಸಿಐಸಿಐ ಬ್ಯಾಂಕ್‌ ₹11,179 ಕೋಟಿ ಮತ್ತು ಐಟಿಸಿ ಎಂ–ಕ್ಯಾಪ್‌ ₹9,987 ಕೋಟಿ ಇಳಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT