ನವದೆಹಲಿ: ಜರ್ಮನಿಯ ವಿಲಾಸಿ ಕಾರ್ ತಯಾರಿಕಾ ಸಂಸ್ಥೆ ಮರ್ಸಿಡಿಸ್ ಬೆಂಜ್‌ನ ಐಷಾರಾಮಿ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ಶ್ರೇಣಿಗಳಲ್ಲಿ ಒಂದಾದ ಲಾಂಗ್ ವೀಲ್ ಬೇಸ್ (ಎಲ್‌ಡಬ್ಲ್ಯುಬಿ) ಹೊಂದಿರುವ ಹೊಸ ಜಿಎಲ್ಇ ಅನ್ನು ಬುಧವಾರ ಇಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.

ಕಂಪನಿಯ ಭಾರತದ ಶಾಖೆಯ ಸಿಇಒ ಮಾರ್ಟಿನ್ ಶ್ವೆಂಕ್, ಮಾರಾಟ ವಿಭಾಗದ ಉಪಾಧ್ಯಕ್ಷ ಸಂತೋಷ್ ಅಯ್ಯರ್ ಅವರು ಎಸ್‌ಯುವಿ ಬಗ್ಗೆ ವಿವರಣೆ ನೀಡಿದರು.

‘ಈ ಶ್ರೇಣಿಯ ಎಸ್‌ಯುವಿಗಳಲ್ಲಿ ಜಿಎಲ್ಇ 300d ಹಾಗೂ ಜಿಎಲ್ಇ 400d ಆವೃತ್ತಿಗಳಿವೆ. ಬುಕಿಂಗ್ ಆರಂಭಗೊಂಡಿದ್ದು, ಈಗ ಬುಕ್ ಮಾಡಿದ ಗ್ರಾಹಕರಿಗೆ ಏಪ್ರಿಲ್‌ನಲ್ಲಿ ವಿತರಿಸಲಾಗುವುದು’ ಎಂದು ಮಾರ್ಟಿನ್ ಶ್ವೆಂಕ್ ತಿಳಿಸಿದರು.

ಬೆಲೆ: ‘ಜಿಎಲ್ಇ 300d ಎಸ್‌ಯುವಿ ಎಕ್ಸ್ ಷೋರೂಂ ಬೆಲೆ ₹ 73.70 ಲಕ್ಷ ಹಾಗೂ 400d ಎಸ್‌ಯುವಿ ಬೆಲೆ
₹ 1.25 ಕೋಟಿ ಇದೆ’ ಎಂದು ಸಂತೋಷ್ ಅಯ್ಯರ್ ಮಾಹಿತಿ ನೀಡಿದರು.

‘ಬಿಎಸ್6 ಮಾನದಂಡದ ಡೀಸೆಲ್ ಚಾಲಿತ ಎಂಜಿನ್ ಹೊಂದಿರುವ ಈ ಎಸ್‌ಯುವಿಗಳು ಹಲವು ವೈಶಿಷ್ಟ್ಯಗಳನ್ನು ಹೊಂದಿವೆ. ಭಾರತದ ಗ್ರಾಹಕರ ಅಭಿರುಚಿ, ಮನೋಭಾವಕ್ಕೆ ಅನುಗುಣವಾಗಿ ಇವುಗಳನ್ನು ವಿನ್ಯಾಸಗೊಳಿಸಲಾಗಿದೆ’ ಎಂದರು.

ಹೊರಗಿನ ವಾತಾವರಣಕ್ಕೆ ತಕ್ಕಂತೆ ಕಾರಿನಲ್ಲಿನ ತಾಪಮಾನ ಸ್ವಯಂಚಾಲಿತವಾಗಿ ಬದಲಾಗುವ, ಸುರಕ್ಷತೆಗಾಗಿ 9 ಏರ್‌ಬ್ಯಾಗ್, ಅತ್ಯುತ್ತಮ ಸಂಗೀತದ ಅನುಭವ ನೀಡುವ ಬರ್ಮಸ್ಟರ್ ಮ್ಯೂಸಿಕ್ ಸಿಸ್ಟಮ್, ವೈರ್‌ಲೆಸ್ ಚಾರ್ಜಿಂಗ್ ವ್ಯವಸ್ಥೆ ಸೇರಿದಂತೆ ಹಲವು ಆಧುನಿಕ ಸೌಲಭ್ಯಗಳು ಇದರಲ್ಲಿವೆ.

(ಕಂಪನಿಯ ಆಹ್ವಾನದ ಮೇರೆಗೆ ವರದಿಗಾರ ದೆಹಲಿಗೆ ತೆರಳಿದ್ದರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.