ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ಗಳ ವಿಲೀನ ಯೋಜನೆ ಶೀಘ್ರಅಂತಿಮ ನಿರೀಕ್ಷೆ

Last Updated 23 ಡಿಸೆಂಬರ್ 2018, 16:40 IST
ಅಕ್ಷರ ಗಾತ್ರ

ನವದೆಹಲಿ: ಬ್ಯಾಂಕ್‌ ಆಫ್‌ ಬರೋಡಾ, ದೇನಾ ಮತ್ತು ವಿಜಯ ಬ್ಯಾಂಕ್‌ಗಳ ವಿಲೀನ ಯೋಜನೆಯು ತಿಂಗಳಾಂತ್ಯಕ್ಕೆ ಅಂತಿಮಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಜನವರಿ 8ರವರೆಗೂ ಸಂಸತ್ ಅಧಿವೇಶನ ನಡೆಯಲಿದ್ದು,ವಿಲೀನ ಯೋಜನೆಯನ್ನು ಸಂಸತ್‌ನಲ್ಲಿ ಮಂಡಿಸಬೇಕಿದೆ.

ಮೂರು ಬ್ಯಾಂಕ್‌ಗಳ ಆಡಳಿತ ಮಂಡಳಿಯಿಂದ‌‌ಷೇರು ವಿನಿಮಯ ಪ್ರಮಾಣ ಮತ್ತು ಪ್ರವರ್ತಕರಿಂದ ಅಗತ್ಯವಿರುವ ಬಂಡವಾಳದ ಮಾಹಿತಿಗಳನ್ನು ಪಡೆದು ಅಂತಿಮ ಯೋಜನೆ ಸಿದ್ಧವಾಗಲಿದೆ ಎಂದು ಹೇಳಿವೆ.

ವಿಲೀನದ ಬಳಿಕ ಅಸ್ತಿತ್ವಕ್ಕೆ ಬರಲಿರುವ ಬ್ಯಾಂಕ್‌ಮುಂದಿನ ಹಣಕಾಸು ವರ್ಷದಿಂದ ಕಾರ್ಯಾರಂಭ ಮಾಡುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ. ಹೊಸ ಬ್ಯಾಂಕ್‌ಗೆ ಬಂಡವಾಳ ನೆರವು ನೀಡುವುದಾಗಿ ಹಣಕಾಸು ಸಚಿವಾಲಯ ಭರವಸೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT