ಕಿರು ಸಾಲ ನೀಡಿಕೆ ಶೇ 40ರಷ್ಟು ಹೆಚ್ಚಳ

ಗುರುವಾರ , ಜೂಲೈ 18, 2019
26 °C

ಕಿರು ಸಾಲ ನೀಡಿಕೆ ಶೇ 40ರಷ್ಟು ಹೆಚ್ಚಳ

Published:
Updated:

ಮುಂಬೈ: ಕಿರು ಹಣಕಾಸು ಉದ್ಯಮವು 2–18–19ನೇ ಹಣಕಾಸು ವರ್ಷದಲ್ಲಿ ₹ 1.78 ಲಕ್ಷ ಕೋಟಿ ಸಾಲ ವಿತರಿಸಿದೆ. 

2017–18ನೇ ಹಣಕಾಸು ವರ್ಷದಲ್ಲಿ ₹ 1.27 ಲಕ್ಷ ಕೋಟಿ ಸಾಲ ನೀಡಲಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಸಾಲ ವಿತರಣೆಯಲ್ಲಿ ಶೇ 40ರಷ್ಟು ಏರಿಕೆ ಕಂಡುಬಂದಿದೆ ಎಂದು ಈಕ್ವಿಫ್ಯಾಕ್ಸ್‌ ಮತ್ತು ಸಿಡ್ಬಿ ಸಂಸ್ಥೆಗಳ ಜಂಟಿ ವರದಿ ತಿಳಿಸಿದೆ.

ಒಟ್ಟಾರೆ ಸಾಲದಲ್ಲಿ 10 ರಾಜ್ಯಗಳ ಪಾಲು ಶೇ 83ರಷ್ಟಿದೆ. ಬಿಹಾರ (ಶೇ 54) ಮೊದಲ ಸ್ಥಾನದಲ್ಲಿದೆ. ಕರ್ನಾಟಕವೂ ಈ ಪಟ್ಟಿಯಲ್ಲಿದೆ.

619 ಜಿಲ್ಲೆಗಳಲ್ಲಿ ಕಿರು ಹಣಕಾಸು ಸಂಸ್ಥೆಗಳು ಕಾರ್ಯಾಚರಣೆ ನಡೆಸುತ್ತಿವೆ.

ಬ್ಯಾಂಕ್‌ಗಳಿಗೆ ನೆರವು
ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ (ಪಿಎಸ್‌ಬಿ) 11 ವರ್ಷಗಳಲ್ಲಿ (2008–09 ರಿಂದ 2018–19) ಕೇಂದ್ರ ಸರ್ಕಾರ ₹ 3.15 ಲಕ್ಷ ಕೋಟಿ ನೆರವು ನೀಡಿದೆ.

ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್‌ ಠಾಕೂರ್‌ ಅವರು ಈ ಮಾಹಿತಿ ನೀಡಿದ್ದಾರೆ.

‘ಆರ್‌ಬಿಐ ಮಾರ್ಗದರ್ಶಿ ಸೂತ್ರದ ಪ್ರಕಾರ, ಬ್ಯಾಂಕ್‌ಗಳು ಶೇ 9ರಷ್ಟು ಸ್ವಂತ ಬಂಡವಾಳ (ಸಿಆರ್‌ಎಆರ್‌) ಹೊಂದಿರಬೇಕು. ಇದಕ್ಕೆ ಅನುಗುಣವಾಗಿ ಬಂಡವಾಳ ನೆರವು ನೀಡಲಾಗಿದೆ. 2019ರ ಮಾರ್ಚ್‌ 31ರ ವೇಳೆಗೆ ಸರ್ಕಾರಿ ಸ್ವಾಮ್ಯದ ಎಲ್ಲಾ 18 ಬ್ಯಾಂಕ್‌ಗಳು ತಮ್ಮ ಸಿಆರ್‌ಎಆರ್‌ ಅಗತ್ಯವನ್ನು ತಲುಪಿವೆ.

ಆಂತರಿಕ ಬಂಡವಾಳ ಸೃಷ್ಟಿ, ಮಾರುಕಟ್ಟೆಗಳಿಂದ ಬಂಡವಾಳ ಸಂಗ್ರಹ ಮತ್ತು ಕೇಂದ್ರ ಸರ್ಕಾರದ ನೆರವಿನ ಮೂಲಕ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಹಣಕಾಸಿನ ನೆರವು ದೊರೆಯುತ್ತದೆ.

ಕೇಂದ್ರ ಬಜೆಟ್‌ನಲ್ಲಿ 2019–20ನೇ ಹಣಕಾಸು ವರ್ಷಕ್ಕೆ ಬ್ಯಾಂಕ್‌ಗಳಿಗೆ ₹ 70 ಸಾವಿರ ಕೋಟಿ ನೆರವು ಘೋಷಿಸಲಾಗಿದೆ.

ಬೇರೆ ಮೂಲಗಳಿಂದ ₹ 2.81 ಲಕ್ಷ ಕೋಟಿ ಸಂಗ್ರಹಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !