ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ಫೋನ್‌ ತಯಾರಿಕೆ: ಮೈಕ್ರೊಮ್ಯಾಕ್ಸ್‌–ಮೀಡಿಯಾಟೆಕ್‌ ಒಪ್ಪಂದ

Last Updated 28 ಅಕ್ಟೋಬರ್ 2020, 14:32 IST
ಅಕ್ಷರ ಗಾತ್ರ

ನವದೆಹಲಿ: ‘ಇನ್‌’ ಎಂಬ ಹೊಸ ಬ್ರ್ಯಾಂಡ್‌ ಅಡಿ ಸ್ಮಾರ್ಟ್‌ಫೋನ್‌ಗಳನ್ನು ವಿನ್ಯಾಸಗೊಳಿಸಲು ಮತ್ತು ಅಭಿವೃದ್ಧಿಪಡಿಸಲು ತೈವಾನ್‌ ದೇಶದ ಚಿಪ್‌ಸೆಟ್‌ ತಯಾರಿಕಾ ಕಂಪನಿ ಮೀಡಿಯಾಟೆಕ್‌ ಜತೆ ಪಾಲುದಾರಿಕೆ ಮಾಡಿಕೊಂಡಿರುವುದಾಗಿ ಮೈಕ್ರೊಮ್ಯಾಕ್ಸ್‌ ತಿಳಿಸಿದೆ.

ಭಾರತದ ಮೊಬೈಲ್‌ ಮಾರುಕಟ್ಟೆಯಲ್ಲಿ ಮತ್ತೆ ಅಸ್ತಿತ್ವ ಕಂಡುಕೊಳ್ಳುವ ಉದ್ದೇಶದಿಂದ ಮೈಕ್ರೊಮ್ಯಾಕ್ಸ್‌ ಯೋಜನೆ ರೂಪಿಸುತ್ತಿದೆ. ಈ ಮೂಲಕ ಚೀನಾದ ಶಿಯೋಮಿ ಕಂಪನಿಗೆ ಪೈಪೋಟಿ ನೀಡಲು ನೀಡಲು ಮುಂದಾಗಿದೆ. ಇದಕ್ಕಾಗಿ ‌ಸಂಶೋಧನೆ ಮತ್ತು ಅಭಿವೃದ್ಧಿ (ಆರ್‌ಆ್ಯಂಡ್‌ಡಿ), ಮಾರುಕಟ್ಟೆ ಹಾಗೂ ತಯಾರಿಕೆಗಾಗಿ ಮುಂದಿನ 12 ರಿಂದ 18 ತಿಂಗಳಲ್ಲಿ ₹ 500 ಕೋಟಿ ಹೂಡಿಕೆ ಮಾಡಲು ಮೈಕ್ರೊಮ್ಯಾಕ್ಸ್‌ ಮುಂದಾಗಿದೆ.

ತನ್ನ ಹೊಸ ಬ್ರ್ಯಾಂಡ್‌ನಡಿ ನವೆಂಬರ್ ಮೊದಲ ವಾರದಲ್ಲಿ ಮೊದಲ ಹ್ಯಾಂಡ್‌ಸೆಟ್‌ ಬಿಡುಗಡೆ ಮಾಡುವ ಗುರಿಯನ್ನು ಕಂಪನಿ ಇಟ್ಟುಕೊಂಡಿದೆ.

ಭಾರತದಲ್ಲೇ ತಯಾರಿಸಿ ಕಾರ್ಯಕ್ರಮದ ಅಡಿ, ಬೆಂಗಳೂರಿನಲ್ಲಿರುವ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದಲ್ಲಿ ‘ಇನ್‌’ ಸ್ಮಾರ್ಟ್‌ಫೋನ್‌ಗಳ ವಿನ್ಯಾಸ ಮತ್ತು ಅಭಿವೃದ್ಧಿ ಕೆಲಸ ಆರಂಭವಾಗಲಿದೆ ಎಂದು ಮೈಕ್ರೊಮ್ಯಾಕ್ಸ್‌ ತಿಳಿಸಿದೆ.

‘ಆರ್‌ಆ್ಯಂಡ್‌ಡಿ ಕೇಂದ್ರದಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಮಿಡಿಯಾ ಟೆಕ್‌ನ ಹೀಲಿಯೊ ಜಿ ಸಿರೀಸ್‌ ಚಿಪ್‌ ಒಳಗೊಂಡ ಹ್ಯಾಂಡ್‌ಸೆಟ್‌ ತಯಾರಾಗಲಿದೆ’ ಎಂದು ಮೈಕ್ರೊಮ್ಯಾಕ್ಸ್‌ನ ಸಹ ಸ್ಥಾಪಕ ರಾಹುಲ್‌ ಶರ್ಮಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT