ಬೆಂಗಳೂರು: ಚಿನ್ನದ ಮೇಲೆ ಸಾಲ ನೀಡುವ ಮುತ್ತೂಟ್ ಫೈನಾನ್ಸ್ ಕಂಪನಿಯು ಹೊಸ ಪ್ರಚಾರ ಅಭಿಯಾನ ಆರಂಭಿಸಿದೆ. ಇದರ ಭಾಗವಾಗಿ ಹೊಸ ‘ಗೋಲ್ಡ್‌ಮ್ಯಾನ್’ ಯೋಜನೆ ಪ್ರದರ್ಶಿಸಲಿದೆ.

‘ವಿವಿಧ ಉಪಯೋಗಗಳಿಗಾಗಿ ನಿಮ್ಮ ಚಿನ್ನ ಬಳಸಿ (ಪುಟ್ ಯುವರ್ ಗೋಲ್ಡ್ ಟು ವರ್ಕ್)’ ಎಂಬ ಸಂದೇಶವನ್ನು ಪ್ರಚಾರ ಆಂದೋಲನದ ಮೂಲಕ ನೀಡಲಾಗುತ್ತದೆ. ಮನೆಯಲ್ಲಿ ಇರುವ ಚಿನ್ನವನ್ನು ಹೇಗೆ ವಿವಿಧ ಉಪಯೋಗಗಳಿಗೆ ಬಳಸಬಹುದು ಮತ್ತು ಎಲ್ಲ ಕಾಲದಲ್ಲಿಯೂ ಚಿನ್ನದ ಸಾಲ ಸಕಾಲಿಕ ಎನ್ನುವುದನ್ನು ಜನರಿಗೆ ತಿಳಿಸುವುದು ಇದರ ಉದ್ದೇಶ.

ಈ ಅಭಿಯಾನವನ್ನು ‘ಮೈತ್ರಿ ಅಡ್ವರ್ಟೈಸಿಂಗ್ ವರ್ಕ್ಸ್’ ಜಾಹೀರಾತು ಸಂಸ್ಥೆಯು ರೂಪಿಸಿದೆ. ಹಾಸ್ಯ ನಟರಾದ ಜಾನಿ ಆಂಟೊನಿ, ಬ್ರಹ್ಮಾನಂದ, ಸಾಧು ಕೋಕಿಲ ಮತ್ತು ರೆಡಿನ್ ಕಿಂಗ್ ಸ್ಲೇ ಅವರು ಕ್ರಮವಾಗಿ ಮಲಯಾಳ, ತೆಲುಗು, ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಅಭಿನಯಿಸಿದ್ದಾರೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಟಿ.ವಿ., ಮುದ್ರಣ, ರೇಡಿಯೊ, ಕೇಬಲ್ ಟಿ.ವಿ., ನಿಯತಕಾಲಿಕೆಗಳು, ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್, ಒಟಿಟಿ, ಯುಟ್ಯೂಬ್, ಸಾಮಾಜಿಕ ಮಾಧ್ಯಮಗಳು ಮತ್ತು ಇತರೆ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಾರ ನಡೆಸಲಾಗುತ್ತಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.