ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುತ್ತೂಟ್‌ ಫೈನಾನ್ಸ್‌ಗೆ ₹1,182 ಕೋಟಿ ಲಾಭ

Published 31 ಮೇ 2024, 16:16 IST
Last Updated 31 ಮೇ 2024, 16:16 IST
ಅಕ್ಷರ ಗಾತ್ರ

ನವದೆಹಲಿ: ಚಿನ್ನದ ಮೇಲೆ ಸಾಲ ನೀಡುವ ಮುತ್ತೂಟ್‌ ಫೈನಾನ್ಸ್‌ ಲಿಮಿಟೆಡ್‌ 2023–24ರ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹1,182 ಕೋಟಿ ನಿವ್ವಳ ಲಾಭ ಗಳಿಸಿದೆ.

2022–23ರ ಇದೇ ಅವಧಿಯಲ್ಲಿ ಕಂಪನಿ ₹1,009 ಕೋಟಿ ಲಾಭ ಗಳಿಸಿತ್ತು. ಈ ಲಾಭಕ್ಕೆ ಹೋಲಿಸಿದರೆ ಶೇ 17ರಷ್ಟು ಏರಿಕೆಯಾಗಿದೆ ಎಂದು ಕಂಪನಿ ಷೇರುಪೇಟೆಗೆ ತಿಳಿಸಿದೆ.

ವರಮಾನವು ₹3,298 ಕೋಟಿಯಿಂದ ₹4,179 ಕೋಟಿಗೆ ಏರಿಕೆಯಾಗಿದೆ. ವೆಚ್ಚವು ₹1,943 ಕೋಟಿಯಿಂದ ₹2,594 ಕೋಟಿಗೆ ಹೆಚ್ಚಳವಾಗಿದೆ. 

ಸಂಪತ್ತಿನ ನಿರ್ವಹಣಾ ಮೌಲ್ಯವು ಶೇ 25ರಷ್ಟು ಏರಿಕೆಯಾಗಿದ್ದು, ₹89,079 ಕೋಟಿಗೆ ಮುಟ್ಟಿದೆ. ಹಿಂದಿನ ಇದೇ ಅವಧಿಯಲ್ಲಿ ₹71,497 ಕೋಟಿಯಷ್ಟಿತ್ತು ಎಂದು ತಿಳಿಸಿದೆ.

₹10 ಮುಖಬೆಲೆಯ ಪ್ರತಿ ಷೇರಿಗೆ ₹24 ಡಿವಿಡೆಂಟ್‌ (ಲಾಭಾಂಶ) ನೀಡಲು ಮಂಡಳಿ ನಿರ್ಧರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT