ಸೋಮವಾರ, ಜುಲೈ 4, 2022
25 °C

ಏರ್ ಇಂಡಿಯಾ ಅಧ್ಯಕ್ಷರಾಗಿ ಎನ್. ಚಂದ್ರಶೇಖರನ್ ನೇಮಕ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಟಾಟಾ ಸನ್ಸ್‌ನ ಮುಖ್ಯಸ್ಥ ಎನ್. ಚಂದ್ರಶೇಖರನ್ ಅವರನ್ನು ಏರ್ ಇಂಡಿಯಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ವಿಮಾನಯಾನ ಉದ್ಯಮ ಮೂಲಗಳು ಸೋಮವಾರ ತಿಳಿಸಿವೆ.

69 ವರ್ಷಗಳ ಬಳಿಕ ಮತ್ತೆ ಟಾಟಾ ಸಮೂಹದ ತೆಕ್ಕೆಗೆ ಏರ್ ಇಂಡಿಯಾ ಬಂದು ಸೇರಿದೆ. ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆಯನ್ನು ₹18,000 ಕೋಟಿ ನೀಡಿ ಟಾಟಾ ಖರೀದಿಸಿತ್ತು.

ಕಳೆದ ವಾರ ಚಂದ್ರಶೇಖರನ್ ಅವರ ನೇಮಕಾತಿಯನ್ನು ವಿಮಾನಯಾನ ಮಂಡಳಿಯು ಅಂತಿಮಗೊಳಿಸಿತ್ತು ಎಂದು ವರದಿಯಾಗಿದೆ.

ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕರನ್ನು (ಸಿಇಒ ಮತ್ತು ಎಂಡಿ) ಟಾಟಾ ಸನ್ಸ್ ಇನ್ನಷ್ಟೇ ನೇಮಕ ಮಾಡಬೇಕಿದೆ.

ಈ ಮೊದಲು ಏರ್‌ ಇಂಡಿಯಾದ ಸಿಇಒ ಆಗಿ ಅಧಿಕಾರ ವಹಿಸಲು ಟಾಟಾ ಗ್ರೂಪ್ ನೀಡಿದ್ದ ಅವಕಾಶವನ್ನು ಟರ್ಕಿಷ್ ಏರ್‌ಲೈನ್ಸ್‌ನ ಮಾಜಿ ಅಧ್ಯಕ್ಷ ಇಲ್ಕರ್ ಆಯ್ಚಿ ತಿರಸ್ಕರಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು